ಮಡಿಕೇರಿ ಫೆ.22 : ನವೀಕರಣಗೊಂಡಿರುವ ಕೊಡಗು ಜಿಲ್ಲಾ ಬಂಟರ ಶಾಂತಿಧಾಮವನ್ನು ‘ಶಾಂತಿಧಾಮ ನಿರ್ವಹಣಾ ಸಮಿತಿ’ಗೆ ಹಸ್ತಾಂತರಿಸಲಾಯಿತು.
ನಗರದ ಸ್ಟೋನ್ ಹಿಲ್ನಲ್ಲಿರುವ ಶಾಂತಿ ಧಾಮದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯರಾದ ಕೊರಗಪ್ಪ ರೈ, ಜಯಕೃಷ್ಣ ಶೆಟ್ಟಿ, ಸಂಘದ ಗೌರವಾಧ್ಯಕ್ಷ ಐತಪ್ಪರೈ ಅವರುಗಳು ಶಾಂತಿಧಾಮ ನಿರ್ವಹಣಾ ಸಮಿತಿ ಯ.ಎಚ್. ಪ್ರಭಾಕರ್ ರೈ, ಶೇಷಪ್ಪ(ಪುಟ್ಟು) ರೈ, ಅರುಣ್ ಶೆಟ್ಟಿ ಅವರಿಗೆ ದಾಖಲಾತಿ ಪುಸ್ತಕ ಹಾಗೂ ರಶೀದಿ ಪುಸ್ತಕವನ್ನು ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಕೊರಗಪ್ಪರೈ, ಶಾಂತಿಧಾಮವನ್ನು ನವೀಕರಣಗೊಳಿಸಿ ಸ್ವಚ್ಛಂದವಾಗಿಸಬೇಕೆಂಬುದು ಹಲವು ವರ್ಷಗಳ ಕನಸಾಗಿತ್ತು. ಜಗದೀಶ್ ರೈಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನದಲ್ಲಿ ಅದು ಈಡೇರಿದೆ. ಮುಂದೆ ಇದರ ನಿರ್ವಹಣೆಗೆ ಸಮಾಜದ ಎಲ್ಲರೂ ಸಹಕಾರ ನೀಡಬೇಕೆಂದರು.
ಬಂಟ ಸಮಾಜ ಸಾಮಾಜಿಕವಾಗಿ ಹಿಂದೆ ಇದೆ. ಮುಂದಿನ ದಿನದಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದವರನ್ನು ಮುನ್ನೆಲೆಗೆತರಬೇಕು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಂಘಟನಾತ್ಮಕ ವಿಚಾರದಲ್ಲಿ ಆಸಕ್ತಿ ವಹಿಸಬೇಕೆಂದು ಕಿವಿಮಾತು ಹೇಳಿದರು.
ಬಿ.ಬಿ.ಐತಪ್ಪರೈ ಮಾತನಾಡಿ, ಬಂಟರ ಶಾಂತಿಧಾಮ ನಿರ್ಮಾಣಕ್ಕೆ ಕಾರಣಕರ್ತರಾದವರ ಶ್ರಮವನ್ನು ಸದಾ ಸ್ಮರಿಸಿಕೊಳ್ಳಬೇಕೆಂದರು.
ಉಪಾಧ್ಯಕ್ಷ ಬಿ.ಕೆ. ರವೀಂದ್ರ ರೈ ಮಾತನಾಡಿ, ಸ್ಮಶಾನಜಾಗಕ್ಕಾಗಿ ದಶಕದ ಹಿಂದೆ ಸಾಕಷ್ಟು ಶ್ರಮಿಸಿದ್ದೇವೆ. ದಾನಿಗಳ ನೆರವಿನಿಂದಚಿತಾಗಾರವನ್ನು ನಿರ್ಮಿಸಲಾಗಿತ್ತು. ಮುಂದೆಯುವಕರು ಇವುಗಳನ್ನು ಉತ್ತಮ ಸ್ಥಿತಿಯಲ್ಲಿ ಕೊಂಡೊಯ್ಯಲು ಶ್ರಮಿಸಬೇಕು. ಬಂಟರ ಭವನ ನಿರ್ಮಾಣ ವಿಚಾರದಲ್ಲೂ ಎಲ್ಲರೂ ಆಸಕ್ತಿಯಿಂದ ಶ್ರಮಿಸಬೇಕೆಂದರು ಹೇಳಿದರು.
ಕಾರ್ಯದರ್ಶಿ ರವೀಂದ್ರ ವಿ.ರೈ ಮಾತನಾಡಿ, ಶಾಂತಿಧಾಮ ನವೀಕರಣಕ್ಕೆಜಿಲ್ಲಾಧ್ಯಕ್ಷ ಜಗದೀಶ್ ರೈಯಾವುದೇ ಫಲಾಪೇಕ್ಷೆಯಿಲ್ಲದೆ ಶ್ರಮಿಸಿದ್ದಾರೆ. ಸ್ವಂತ ಹಣದಲ್ಲಿ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಶ್ರೇಷ್ಠ ಕಾರ್ಯ ಮಾಡಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಿ.ಡಿ. ಜಗದೀಶ್ ರೈ ಮಾತನಾಡಿ, ಈ ಹಿಂದೆ ಸ್ಮಶಾನಕ್ಕೆ ಬಂದವರು ಅಭಿವೃದ್ಧಿ ಬಗ್ಗೆ ಸಲಹೆ ನೀಡುತ್ತಿದ್ದರು. ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡ ಆರಂಭದಲ್ಲೇ ಈ ಕಾರ್ಯವನ್ನು ಮಾಡಬೇಕೆಂದು ಪಣತೊಟ್ಟಿದ್ದೆ. ಅದರಂತೆ ಸಂಘ ಹಾಗೂ ಎಲ್ಲರ ಸಹಕಾರದಿಂದ ಇಂದು ಉತ್ತಮ ಶಾಂತಿಧಾಮವಾಗಿ ರೂಪುಗೊಂಡಿದೆ. ಮುಂದಿನ ದಿನದಲ್ಲಿ ಈ ಜಾಗದಲ್ಲಿ ಉತ್ತಮ ರೀತಿಯ ಉದ್ಯಾನ ನಿರ್ಮಾಣ ಮಾಡಲಾಗುವುದು. ಆ ಸಂದರ್ಭವೂ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಖಜಾಂಚಿ ರತ್ನಾಕರ ರೈ, ನಿರ್ದೇಶಕರಾದ ಬಿ.ಕೆ.ಬಾಲಕೃಷ್ಣ ರೈ, ಪ್ರಮೋದ್ ಕುಮಾರ್ ರೈ , ಬಿ.ಎನ್. ಜಯರಾಮ್ ರೈ, ಸಹಕಾರ್ಯದರ್ಶಿ ಬಿ.ಸಿ.ಹರೀಶ್ ರೈ ಗಾಳಿಬೀಡು, ಬಿ.ಜೆ.ಮನೋಜ್ ಶೆಟ್ಟಿ, ಶರತ್ ಶೆಟ್ಟಿ, ಬಿ.ಬಿ. ದಿವೇಶ್ ಕುಮಾರ್ ರೈ ಸೇರಿದಂತೆ, ಸಂಘದ ಸದಸ್ಯರು, ಸಮಾಜದ ಹಿರಿಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.ಕಿಶೋರ್ ರೈ ಕತ್ತಲೆ ಕಾಡು ಕಾರ್ಯಕ್ರಮ ನಿರ್ವಹಿಸಿದರು.
ಕಾಡು ಗಿಡಗಳು, ಎತ್ತರ ತಗ್ಗು ಪ್ರದೇಶದಿಂದ ಕೂಡಿದ್ದ ಜಾಗವನ್ನು ಸಮತಟ್ಟು ಮಾಡಲಾಗಿದೆ. ಶವ ಸಂಸ್ಕಾರ ಮಾಡುವ ಕಟ್ಟಡಕ್ಕೆ ಬಣ್ಣ ಬಳಿಯಲಾಗಿದ್ದು, ಶವ ಸುಡುವ ಹಳೆಯ ಶಿಥಿಲಾವಸ್ಥೆಯ ಪರಿಕರವನ್ನುತೆರವು ಮಾಡಿ ಹೊಸದಾಗಿ 1.85 ಲಕ್ಷ ರೂ. ವೆಚ್ಚದಲ್ಲಿ ಸಿಲಿಕಾನ್ ಚೇಂಬರ್ ಅಳವಡಿಸಲಾಗಿದೆ. ಜತೆಗೆ ಆವರಣದಲ್ಲಿ ನೀರಿನ ಟ್ಯಾಂಕ್, ಕುಳಿತುಕೊಳ್ಳಲು ಬೆಂಚ್ ಅಳವಡಿಸಲಾಗಿದೆ. ಮುಂದೆ ಇಲ್ಲಿ ಹಣ್ಣಿನಗಿಡ, ಅಲಂಕಾರಿಕ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ.
Breaking News
- *ಕನ್ನಡ ಸಾಹಿತ್ಯ ಭವನ ನಿರ್ಮಾಣ : ಅಗತ್ಯ ಸಹಕಾರಕ್ಕೆ ಕೊಡಗು ಜಿಲ್ಲಾ ಕ.ಸಾ.ಪ ಮನವಿ*
- *ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ‘ಅರೆ ವಿಶೇಷ ಕೊಠಡಿ’ ಉದ್ಘಾಟನೆ : ಎಲ್ಲರಿಗೂ ಎಲ್ಲೆಡೆ ಆರೋಗ್ಯ ಸೌಲಭ್ಯ ದೊರೆಯಲಿ : ಶಾಸಕ ಡಾ.ಮಂತರ್ ಗೌಡ*
- *ಬೃಹತ್ ಭೂಪರಿವರ್ತನೆ, ಭೂವಿಲೇವಾರಿ, ಲೇಔಟ್, ಮೆಗಾ ಟೌನ್ಶಿಪ್ಗೆ ವಿರೋಧ : ಕಡಂಗದಲ್ಲಿ ಸಿಎನ್ಸಿಯಿಂದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ*
- *ಡಿ.8 ರಂದು ಮಡಿಕೇರಿಯಲ್ಲಿ ಸಂಸದರ ನೂತನ ಕಚೇರಿ ಆರಂಭ*
- *ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆ : ನೂತನ ಪದಾಧಿಕಾರಿಗಳ ಆಯ್ಕೆ*
- *ಬಿ.ಎಸ್.ಗೋಪಾಲಕೃಷ್ಣ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ*
- *ಕರಿಕೆ ಬಿಜೆಪಿ ಶಕ್ತಿ ಕೇಂದ್ರಕ್ಕೆ ಪದಾಧಿಕಾರಿಗಳ ಆಯ್ಕೆ*
- *ವೀರ ಸೇನಾನಿಗಳಿಗೆ ಅಗೌರವ : ಡಿ.6ರಂದು ಮಡಿಕೇರಿಯಲ್ಲಿ ಮಾಜಿ ಸೈನಿಕರಿಂದ ಪ್ರತಿಭಟನೆ*
- *‘ಸ್ವಾಭಿಮಾನಿ’ ಸಮಾವೇಶದಲ್ಲಿ ಕೊಡಗಿನಿಂದ 8 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿ*
- *ಚೇಶೈರ್ ಹೋಮ್ ಶಾಲೆಯ ಮುಖ್ಯಶಿಕ್ಷಕ ಶಿವರಾಜ್ ಗೆ ಸನ್ಮಾನ*