ವಿರಾಜಪೇಟೆ ಫೆ.24 : ದಕ್ಷಿಣ ವಲಯದ ಗಾಲ್ಫ್ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ವಿದ್ಯಾರ್ಥಿ ಎಂ.ಟಿ.ಮೊಹಮ್ಮದ್ ಅಯಾನ್ ಸಾಧನೆ ಮಾಡಿದ್ದಾರೆ.
ಕೂರ್ಗ್ ಗಾಲ್ಫ್ ಲಿಂಕ್ಸ್ ಬಿಟ್ಟಂಗಾಲ ಹಾಗೂ ಐ.ಜಿ.ಯು, ಎಂ.ಡಿ.ಜಿ.ಸಿ ಫೀಡರ್ ಗಾಲ್ಫ್ ಮಡಿಕೇರಿಯಲ್ಲಿ ನಡೆದ ‘ಡಿ’ ಬಾಲಕರ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ಮೊಹಮ್ಮದ್ ಅಯಾನ್ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಶಾಲಾ ಮುಖ್ಯೋಪಾಧ್ಯಾಯಿನಿ ಎಂ.ಬಿ.ಪ್ರಮೀಳಾ, ಸಹ ಮುಖ್ಯ ಶಿಕ್ಷಕಿ ನಿವ್ಯ ಅಭಿನಂದನೆ ಸಲ್ಲಿಸಿದರು.








