ಮಡಿಕೇರಿ ಮಾ.2 : ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಶೆಟ್ಟಿಗೇರಿ ಗ್ರಾಮದ ಮಹಿಳೆ ಕಾಣೆಯಾಗಿದ್ದಾರೆ. ಟಿ.ಶೆಟ್ಟಿಗೇರಿ ಗ್ರಾಮದ ಜೇನುಕುರುಬರ ಮಹೇಶ್ ಎಂಬವರ ಪತ್ನಿ ಸೌಮ್ಯ (26) ಎಂಬಾಕೆ ಮಗುವಿನ ಆರೈಕೆಯ ಸಲುವಾಗಿ ತಾಯಿಯ ಮನೆಗೆ ಬಂದಿದ್ದರು. ಫೆ.25 ರಂದು ಮಧ್ಯಾಹ್ನ 2 ಗಂಟೆಗೆ ಅವಧಿಯಲ್ಲಿ ಒಂದು ತಿಂಗಳ ಗಂಡು ಮಗುವನ್ನು ಬಿಟ್ಟು ಮನೆಯಿಂದ ಕಾಣೆಯಾದ್ದಾರೆ. ಇದುವರೆಗೂ ಪತ್ತೆಯಾಗಿಲ್ಲ ಎಂದು ಪತಿ ಮಹೇಶ್ ಅವರು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕನ್ನಡ ಭಾಷೆ ಮಾತನಾಡುವ ಮಹಿಳೆ ಅಂದಾಜು 5.2 ಅಡಿ ಎತ್ತರ ಇದ್ದು, ಬಿಳಿ ಬಣ್ಣ, ಕೋಲು ಮುಖ, ತೆಳ್ಳನೆಯ ಮೈಕಟ್ಟನ್ನು ಹೊಂದಿದ್ದಾರೆ, ಮಹಿಳೆಯನ್ನು ಕಂಡವರು ಶ್ರೀಮಂಗಲ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟಣೆಯಲ್ಲಿ ಕೋರಿದ್ದಾರೆ. ದೂರವಣಿ ಸಂಖ್ಯೆ 08274-246246 ಅಥವಾ 9480804960 ಸಂಪರ್ಕಿಸುವಂತೆ ಕೋರಿದೆ.








