ಮಡಿಕೇರಿ ಮಾ.3 : ಕಾಂಗ್ರೆಸ್ ಪಕ್ಷ ‘ಗ್ಯಾರಂಟಿ ಕಾರ್ಡ್’ ಅಭಿಯಾನದ ಮೂಲಕ ಜನರನ್ನು ವಂಚಿಸುತ್ತಿದೆಯೆಂದು ಟೀಕಿಸಿದ ಶಾಸಕ ಕೆ.ಜಿ.ಬೋಪಯ್ಯ, ಯಾವುದೇ ಗ್ಯಾರಂಟಿ ಇಲ್ಲದ ಗ್ಯಾರಂಟಿ ಕಾರ್ಡ್ ಇದು ಎಂದು ಲೇವಡಿ ಮಾಡಿದರು.
ಮಡಿಕೇರಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಮಹಿಳೆಯರಿಗೆ ಮಾಸಿಕ 2 ಸಾವಿರ ರೂ., ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಹೇಳುವ ಗ್ಯಾರಂಟಿ ಕಾರ್ಡ್ ಪಡೆಯುವ ನಾಗರಿಕರು ಅದನ್ನು ಪಡೆಯುವುದಾದರು ಎಲ್ಲಿಂದ ಎಂದು ಪ್ರಶ್ನಿಸಿದ ಅವರು, ಗ್ಯಾರಂಟಿ ಕಾರ್ಡ್ನ್ನು ಉಪ್ಪು ಹಾಕಿ ನೆಕ್ಕಬೇಕಷ್ಟೆ ಎಂದು ಕುಟುಕಿದರು.
ನಿಮ್ಮ ಅಸ್ತಿತ್ವವೇ ಇಲ್ಲದೆ ಜನರಿಗೇನು ಗ್ಯಾರಂಟಿ ಕೊಡುತ್ತೀರ ಎಂದು ಕಾಂಗ್ರಸ್‌ನ್ನು ಪ್ರಶ್ನಿಸಿದ ಬೋಪಯ್ಯ, ಬಿಜೆಪಿ ಏನು ತನ್ನ ಪ್ರಣಾಳಿಕೆಯನ್ನು ಹೇಳುತ್ತದೋ ಅದನ್ನು ಕಾರ್ಯಗತಗೊಳಿಸಿ ತೋರಿಸುತ್ತದೆ ಎಂದರು.









