ವಿರಾಜಪೇಟೆ ಮಾ.9 : ಬಲಿಜ ಬಾಂಧವರಿಂದ ಕೈವಾರ ತಾತಯ್ಯ ನವರ 297ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಿರಾಜಪೇಟೆಯ ವಿದ್ಯಾ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನಾಂಗ ಬಾಂಧವರು ಕೈವಾರ ತಾತಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಜನಾಂಗದ ಮುಖಂಡ ಯೋಗೇಶ್ ನಾಯ್ಡು, ಜಿಲ್ಲೆಯಲ್ಲಿ ಅನೇಕ ತಲೆಮಾರಿನಿಂದ ಬಲಿಜ ಜನಾಂಗದರವರು ನೆಲೆಸಿದ್ದಾರೆ. ಜಿಲ್ಲೆಯ ಯಾವುದಾದರೊಂದು ಭಾಗದಲ್ಲಿ ಶ್ರೀ ಕೈವಾರ ತಾತಯ್ಯನವರ ಪ್ರತಿಮೆ ನಿರ್ಮಾಣ ಮಾಡಬೇಕು. ಅಲ್ಲದೆ ವಿರಾಜಪೇಟೆಯ ಯಾವುದಾದರೂ ಬಡಾವಣೆಗೆ ತಾತಯ್ಯ ಅವರ ಹೆಸರನ್ನು ಇಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡುವುದಾಗಿ ಹೇಳಿದರು.
ಜನಾಂಗದ ಪ್ರಮುಖರಾದ ಅಪ್ಪಣ್ಣ, ಗಣೇಶ್, ರಂಜನ್, ಚಂದ್ರ, ಮಿತುನ್, ಮೂರ್ತಿ, ಶ್ರೀನಿವಾಸ್, ವಿದ್ಯ, ಲಲಿತ, ಪೂರ್ಣಿಮಾ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.









