ಮಡಿಕೇರಿ ಮಾ.9 ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ತಿಮ್ಮಯ್ಯ ಅವರ ಮೊಮ್ಮಗಳು ಅಮೃತಾ ಭೇಟಿ ನೀಡಿ ಸ್ಮಾರಕ ಭವನ ವೀಕ್ಷಿಸಿದರು.
ಇದೇ ಮೊದಲ ಬಾರಿಗೆ ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ ನೀಡಿದ ಅಮೖತಾ ತನ್ನ ಅಜ್ಜ ತಿಮ್ಮಯ್ಯ ಅವರ ಸ್ಮರಣಾರ್ಥ ಸರ್ಕಾರ ರೂಪಿಸಿದ ಸಂಗ್ರಹಾಲಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮ್ಯೂಸಿಯಂ ವ್ಯವಸ್ಥಾಪಕ ಗೌಡಂಡ ಸುಬೇದಾರ್ ಮೇಜರ್ ತಿಮ್ಮಯ್ಯ ಇಲ್ಲಿನ ಸಂಗ್ರಹದ ಬಗ್ಗೆ ಮಾಹಿತಿ ನೀಡಿದರು. ಅಮೃತಾ ಜನರಲ್ ತಿಮ್ಮಯ್ಯ ಪುತ್ರಿ ಮಿರೆಲ್ – ಮೇಜರ್ ಜನರಲ್ ಕೊಂಗೇಟಿರ ಚಂಗಪ್ಪ ಅವರ ಪುತ್ರಿಯಾಗಿದ್ದು ಉತ್ತರಾಂಚಲ್‍ನ ಅಲ್ಮೋರಾ ಎಂಬಲ್ಲಿ ನೆಲೆಸಿದ್ದಾರೆ.









