ಮಡಿಕೇರಿ ಮಾ.10 : ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಬೂತ್ ಮಟ್ಟದಲ್ಲಿ ಮನೆ ಮನೆಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಕಾರ್ಯಕ್ರಮ ನಡೆಯಿತು.
ಕಾಂಗ್ರೆಸ್ ನಗರಾಧ್ಯಕ್ಷ ಬಿ.ವೈ.ರಾಜೇಶ್ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಬೂತ್ ಸಂಖ್ಯೆ 203 ಹಾಗೂ 204ರಲ್ಲಿ ಬೂತ್ ಅಧ್ಯಕ್ಷ ಹಸೈನ್ ಹಾಗೂ ಎಂ.ಎಂ.ಯಾಕುಬ್ ಮುಂದಾಳತ್ವದಲ್ಲಿ ತ್ಯಾಗರಾಜ ನಗರದ ಮನೆಗಳಿಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಿಸಲಾಯಿತು.
ಕಾಂಗ್ರೆಸ್ ನ ಮೊದಲ ಗ್ಯಾರಂಟಿ ಕಾರ್ಡ್ “ಗೃಹಜ್ಯೋತಿ” ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ಉಚಿತ ಪೂರೈಕೆ, 2ನೇ ಗ್ಯಾರಂಟಿ ಪ್ರತಿ ಮನೆಯೊಡತಿಗೆ 2 ಸಾವಿರ ರೂ. ಪ್ರೋತ್ಸಾಹ ಧನ ನೀಡಲು “ಗೃಹಲಕ್ಷ್ಮಿ” ಯೋಜನೆ ಜಾರಿ ಮತ್ತು 3ನೇ ಗ್ಯಾರಂಟಿಯಾಗಿ ಅನ್ನಭಾಗ್ಯ ಯೋಜನೆ ಮೂಲಕ ಬಿಪಿಎಲ್ ಕಾರ್ಡ್ದಾರರಿಗೆ 10 ಕೆ.ಜಿ.ಅಕ್ಕಿ ಉಚಿತವಾಗಿ ನೀಡುವ ಭರವಸೆಯ ಕಾರ್ಡ್ನ್ನು ಮನೆ ಮನೆಗೆ ವಿತರಿಸಿದರು.
ಈ ಸಂದರ್ಭ ಕೆಪಿಸಿಸಿ ಮಾದ್ಯಮ ಸಂವಹನ ವಕ್ತಾರರು ಹಾಗೂ ಪ್ರಚಾರ ಸಮಿತಿ ಜಿಲ್ಲಾ ಉಸ್ತುವಾರಿ ಟಿ.ಪಿ.ರಮೇಶ್, ಜಿಲ್ಲಾ ಕಾಂಗ್ರೆಸ್ ಪಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಜು ತಿಮ್ಮಯ್ಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸುರಯ್ಯ ಅಬ್ರಾರ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಹಾಗೂ ಪ್ರಮುಖರಾದ ತೆನ್ನಿರಾ ಮೈನಾ, ಕಲೀಲ್ ಬಾಷ, ಯಶ್ ದೋಲ್ಪಡಿ, ಮಿನಾಜ್, ದಿವ್ಯ, ಮುಂತಾಜ್ ಬೇಗಂ, ಪ್ರಕಾಶ್ ಆಚಾರ್ಯ, ಸದಾ ಮುದ್ದಪ್ಪ, ಜಗದೀಶ್, ಬೂತ್ ಸಮಿತಿ ಪದಾಧಿಕಾರಿಗಳಾದ ಸುಹೈಲ್, ಶೌಕತ್ ಆಲಿ, ಆಸಿಪ್, ಇಮ್ರಾನ್, ಆಯಿಷಾ ಹಾಗೂ ಸದಸ್ಯರುಗಳಾದ ಆಸಿಯಾ, ಜಮೀಳಾ, ರುಕ್ಯಾ, ಜಿಯಾದ್, ಆಶಿಕ್, ಇನ್ಜೀಮ್, ರಫೀಕ್, ಸಪ್ವಾನ್, ಅಲ್ತಾಫ್, ಹನೀಪ್ ಹಾಗೂ ಇತರ ಕಾರ್ಯಕರ್ತರು ಹಾಜರಿದ್ದರು.