ಮಡಿಕೇರಿ ಮಾ.11 : ಕೊಡಗು ಜಿಲ್ಲಾ ಛಾಯಾಗ್ರಹಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಂಘದ ಸಂಸ್ಥಾಪಕ ಅಧ್ಯಕ್ಷ ಮೂಕಳೇರ ಲಕ್ಷ್ಮಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕುಶಾಲನಗರದ ರೈತಭವನದಲ್ಲಿ ಆಯೋಜಿಸಿರುವ ಛಾಯಾ ಸಮ್ಮಿಲನ- 2023 ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಛಾಯಗ್ರಾಹಕರ ಕ್ಷೇಮಾಭಿವೃದ್ಧಿ ಸಂಘವನ್ನು 2009 ರಲ್ಲಿ ಸ್ಥಾಪಿಸಿ ಸ್ಥಾಪಕ ಅಧ್ಯಕ್ಷರಾದ ಪೊನ್ನಂಪೇಟೆಯ ಸುಮನ ಸ್ಟುಡಿಯೋದ ಮಾಲೀಕ ಮೂಕಳೇರ ಲಕ್ಷ್ಮಣ್ ದಂಪತಿಯವರನ್ನು ಹಿರಿಯ ವಕೀಲ ಹಾಗೂ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಛಾಯಾಗ್ರಾಹಕ ಸಂಘದ ಅಧ್ಯಕ್ಷ ಪರಮೇಶ್, ಉಪಾಧ್ಯಕ್ಷ ಹೆಚ್.ಎಸ್ ನಾಗೇಶ್, ಜಿಲ್ಲಾ ಸಂಘದ ಅಧ್ಯಕ್ಷ ಎ.ಆರ್. ವಸಂತ್ , ತಾಲೂಕು ಸಂಘದ ಅಧ್ಯಕ್ಷರುಗಳು ಉಪಸ್ಥಿತರಿದ್ದರು.