ಚೆಯ್ಯಂಡಾಣೆ ಮಾ.13 : ಸ್ಥಳೀಯ ಸರಕಾರಿ ಪ್ರಾಥಮಿಕ ಆರೋಗ್ಯ ಉಪಕೇಂದ್ರ ‘ಎ’ ವತಿಯಿಂದ ನರಿಯಂದಡ ಕೇಂದ್ರ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ -19, ಸಾಂಕ್ರಾಮಿಕ ರೋಗಗಳು, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ (ಪಿಎಂಜೆಎವೈ ) ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ನಡೆಯಿತು.
ಪ್ರಥಮ ಬಹುಮಾನವನ್ನು 9 ನೇ ತರಗತಿ ವಿದ್ಯಾರ್ಥಿ ಎಂ.ಎಂ.ತಂಜನ್, ದ್ವಿತೀಯ ಬಹುಮಾನವನ್ನು 8ನೇ ತರಗತಿಯ ಸಿ.ಎಸ್. ದೀಪಿಕಾ, ತೃತೀಯ ಬಹುಮಾನವನ್ನು 9ನೇ ತರಗತಿಯ ಅಂಕಿತ ಪಡೆದು ಕೊಂಡರು.
ಕಾರ್ಯಕ್ರಮದಲ್ಲಿ ನರಿಯಂದಡ ಕೇಂದ್ರ ಪ್ರೌಢ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಸುನೀತಾ, ಸ್ಥಳೀಯ ಆಯೋಗ್ಯ ಕೇಂದ್ರದ ಆರೋಗ್ಯಧಿಕಾರಿ ಕನಕಾವತಿ, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕ ವೃಂದದವರು ಹಾಜರಿದ್ದರು.
ವರದಿ : ಅಶ್ರಫ್