ಮಡಿಕೇರಿ ಮಾ.13 : ಜನನಿ ಮಹಿಳಾ ಮಂಡಳಿಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ನಗರದ ರಾಘವೇಂದ್ರ ದೇವಾಲಯ ರಸ್ತೆಯ ನೇತಾಜಿ ಜಂಕ್ಷನ್ ನ ಹೇಮಾವತಿ ಪ್ರಸನ್ನ ಅವರ ಮನೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಡಗು ಡಿಸಿಸಿ ಬ್ಯಾಂಕಿನ ನಿವೃತ್ತ ಉಪ ಪ್ರಧಾನ ವ್ಯವಸ್ಥಾಪಕರಾದ ಪ್ರೇಮ ಕಾರ್ಯಪ್ಪ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕುರಿತು ತಿಳಿಸಿದರು. ಕುಟುಂಬದಲ್ಲಿ ಮಹಿಳೆಯರು ಪ್ರತಿನಿತ್ಯ ಮಾಡಬೇಕಾದ ಕೆಲಸ ಕಾರ್ಯಗಳ ಜೊತೆಗೆ ಮಕ್ಕಳನ್ನು ಯಾವ ರೀತಿಯಲ್ಲಿ ಸಂಸ್ಕಾರಯುಕ್ತರನ್ನಾಗಿ ಮಾಡಬಹುದು. ಇದರೊಂದಿಗೆ ಉತ್ತಮ ಸಮಾಜವನ್ನು ಹೇಗೆ ಕಟ್ಟಬಹುದು ಎಂಬುದರ ಕುರಿತು ತಿಳಿಸಿದರು. ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಂಡು ಸದೃಢ ಭಾರತ ನಿರ್ಮಿಸುವಲ್ಲಿ ತಮ್ಮ ತಮ್ಮ ಜವಾಬ್ಧಾರಿಯನ್ನು ಯಾವ ರೀತಿ ನಿರ್ವಹಿಸಬೇಕು ಎಂದು ತಿಳಿಸಿದರು.
ಪ್ರಮುಖರಾದ ಲಿಸಿ ಅಮ್ಮಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನನಿ ಮಹಿಳಾ ಮಂಡಳಿಯ ಸದಸ್ಯರಿಗೆ ಹಾಗೂ ಮಹಿಳಯರಿಗೆ ರಸಪ್ರಶ್ನೆ ಕಾರ್ಯಕ್ರಮ, ಗಾದೆಯನ್ನು ಪೂರ್ಣಗೊಳಿಸುವುದು, ಅಕ್ಷರ ಬಂಧ, ಆಶುಭಾಷಾ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜನನಿ ಮಹಿಳಾ ಮಂಡಳಿಯ ಉಪಾಧ್ಯಕ್ಷರಾದ ಹೇಮಾವತಿ ಪ್ರಸನ್ನ ಕಾರ್ಯಕ್ರಮವನ್ನು ನಿರೂಪಿಸಿದರು, ನಿರ್ದೆಶಕರಾದ ಪ್ರೇಮ ಸ್ವಾಗತಿಸಿ, ಖಜಾಂಚಿ ಜಯಪಾಲಕ್ಷ ವಂದಿಸಿದರು. ಅಧ್ಯಕ್ಷರಾದ ರಾಣಿ ಅರುಣ್ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದರು.