ನಾಪೋಕ್ಲು ಮಾ.21 : ಹಳೆ ತಾಲೂಕಿನ ನಾಡು ಭಗವತಿ ದೇವರ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು.
ಮಾರ್ಚ್ 17 ರಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆದುಕೊಂಡು ಬಂದ ಶ್ರೀ ಭಗವತಿ ದೇವರ ಹಬ್ಬವು ಪಟ್ಟಣಿ ಆಚರಣೆಯೊಂದಿಗೆ ಸಂಪನ್ನ ಗೊಂಡಿತ್ತು.
ಆರ0ಭದಲ್ಲಿ ಬಂಡಾರವನ್ನು ದೇವಾಲಯಕ್ಕೆ ತರಲಾಯಿತು. ನಂತರ ಅಂದಿಬೊಳಕು, ರಾತ್ರಿ ಶ್ರೀ ಭದ್ರಕಾಳಿ ದೇವರ ಕೋಲ ನಡೆಯಿತು. ದೇವರ ಊರ ಪ್ರದಕ್ಷಿಣೆ, ಎತ್ತುಪೋರಾಟ. ಪಟ್ಟಣಿ ಹಬ್ಬ ವಿಶೇಷ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನದಾನ ನಡೆಯಿತು.
ಬಳಿಕ ಗ್ರಾಮಸ್ಥರಿಂದ ಬೋಳಕಾಟ್, ದೇವರ ನೃತ್ಯ ಬಲಿ ಸಾಂಗವಾಗಿ ನೆರವೇರಿತು.
ಉತ್ಸವದ ಧಾರ್ಮಿಕ ಪೂಜಾ ವಿಧಿ ವಿಧಾನವನ್ನು ಗಿರೀಶ್ ತಂತ್ರಿ ಪೇರೂರು, ದೇವಾಲಯದ ಮುಖ್ಯ ಅರ್ಚಕ ಹರೀಶ್ ಕೆಕುಣ್ಣಾಯ, ಹಾಗೂ ನೃತ್ಯ ಬಲಿಯನ್ನು ಜಯಚಂದ್ರ ನೆರವೇರಿಸಿ ಕೊಟ್ಟರು.
ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ, ನಿವೃತ್ತ ಶಿಕ್ಷಕ ಕುಲ್ಲೇಟಿರ ಗುರುವಪ್ಪ, ಕಾರ್ಯದರ್ಶಿ ಕಂಗಂಡ ಜಾಲಿ ಪೂವಪ್ಪ, ಆಡಳಿತ ಮಂಡಳಿ ನಿರ್ದೇಶಕರು, ತಕ್ಕ ಮುಖ್ಯಸ್ಥರು ಹಾಗೂ ಊರು ಪರ ಊರಿನ ಭಕ್ತಾದಿಗರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿವಿಧ ಸೇವೆಯನ್ನು ನೆರವೇರಿಸಿಕೊಂಡರು.
ಪವಿತ್ರ ಕಾವೇರಿ ನದಿಯಲ್ಲಿ ಭಗವತಿ ದೇವರ ಜಳಕ ಮತ್ತು ನಗರದಲ್ಲಿ ಮೆರವಣಿಗೆ ನಂತರ ರಾತ್ರಿ ವಿವಿಧ ದೇವರುಗಳ ನರಿಪೂಧ, ನುಚ್ಚುಟೆ, ಅಂಜಿ ಕೂಟ್ ಮೂರ್ತಿ ದೇವರ ಕೋಲ ನಡೆದು ಬಳಿಕ ಕಲಿಯಾಟ ಅಜ್ಜಪ್ಪ, ಮತ್ತು ವಿ಼ಷ್ಣು ಮೂರ್ತಿ ದೇವರ ಕೋಲ ನಡೆದು ಅನ್ನದಾನದೊಂದಿಗೆ ಹಬ್ಬವು ನೆರವೇರಿತು.
ವರದಿ : ದುಗ್ಗಳ ಸದಾನಂದ