ಚೆಟ್ಟಳ್ಳಿ ಮಾ.21 : ಚೆನ್ನೈನಲ್ಲಿ ನಡೆದ ಇಂಡಿಯನ್ ನ್ಯಾಷನಲ್ ಸೌತ್ ಇಂಡಿಯಾ ರ‍್ಯಾಲಿಯ ಜಿಪ್ಸಿಕ್ಲಾಸ್ ನಲ್ಲಿ ಕೊಡಗಿನ ಪೊನ್ನಂಪೇಟೆಯ ಕೊಕ್ಕೇಂಗಡ ದರ್ಶನ್ ನಾಚಪ್ಪ (ಡ್ರೈವರ್) ಹಾಗೂ
ಮೇಕೇರಿರ ಅಭಿನವ್ ಗಣಪತಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ.
ಮಾ.16 ರಿಂದ ಮಾ.19 ರವರೆಗೆ ಚೆನ್ನೈನಲ್ಲಿ ನಡೆದ ಈ ವರ್ಷದ ಮೊದಲ ಇಂಡಿಯನ್ ನ್ಯಾಷನಲ್ ರ‍್ಯಾಲಿ (INRC)ಯು ಚೆನ್ನೈನಲ್ಲಿ ಐಎನ್ ಆರ್ ಸಿ 1 ರಿಂದ ಐನ್ ಆರ್ ಸಿ 4 ಕ್ಯಾಟಗರಿ ಹಾಗೂ ಜಿಪ್ಸಿ ಕ್ಯಾಟಗರಿಯು ಹೆಚ್ಚಿನ ವೇಗದ ತೀರಾ ಅಪಾಯ ಕಾರಿ ರ‍್ಯಾಲಿ ನಡೆದಿದ್ದು, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ 60 ನುರಿತ ರ‍್ಯಾಲಿ ಪಟುಗಳು ಭಾಗವಹಿಸಿದರು.
ಜಿಪ್ಸಿಕ್ಲಾಸ್ ನಲ್ಲಿ ಕೊಡಗಿನ ಪೊನ್ನಂಪೇಟೆಯ ಕೊಕ್ಕೇಂಗಡ ದರ್ಶನ್ ನಾಚಪ್ಪ (ಡ್ರೈವರ್) ಹಾಗೂ ಮೇಕೇರಿರ ಅಭಿನವ್ ಗಣಪತಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ. ದರ್ಶನ್ ನಾಚಪ್ಪ ಹಾಗೂ ಮೇಕೇರಿರ ಅಭಿನವ್ ಗಣಪತಿ ಈ ಹಿಂದೆ ನಡೆದ (INRC) ರ‍್ಯಾಲಿ ಹಲವು ಆಟೋಕ್ರಾಸ್ ನಲ್ಲಿ ಭಾಗವಹಿಸಿ ಗೆಲುವನ್ನು ಸಾಧಿಸಿದ್ದಾರೆ. ಇವರಲ್ಲದೆ ಕೊಡಗಿನ ರ‍್ಯಾಲಿಪಟುಗಳಾದ ಜಿಪ್ಸಿ ಕ್ಯಾಟಗರಿಯಲ್ಲಿ ಮೇಕೆರಿರ ಕಾರ್ಯಪ್ಪ, ಐ ಎನ್ ಆರ್ ಸಿ -4 ರಲ್ಲಿ ಅಭಿ ರೈ, ಬೆಲಿನೋ ಆರ್ ಎಸ್ ಟ ರ್ಬೋದಲ್ಲಿ ಅಮ್ಮತಿಯ ಕೊಂಗಂಡ ಗಗನ್ ಕರಂಬಯ್ಯ, ಐ ಎನ್ ಆರ್ ಸಿ -2 ರಲ್ಲಿ ವಿರಾಜಪೇಟೆಯ ಸುನಿಲ್ ಕಬೀರ್ ವಿಡ್ಬ್ಯೂ ಪೋಲೋ ದಲ್ಲಿ ವಿವಿಧ ಹಂತದಲ್ಲಿ ಭಾಗವಹಿಸಿದರು.
ಐಎನ್ ಆರ್ ಸಿರ‍್ಯಾಲಿಯಲ್ಲಿ ಕೊಡಗಿನಿಂದ ಭಾಗವಹಿಸಿದ ಎಲ್ಲಾವಾಹನವನ್ನು ಚೆಪ್ಪುಡಿರ ಮಾಚಯ್ಯ ಸಿದ್ದಗೊಳಿಸಿದ್ದು, ರ‍್ಯಾಲಿ ಸಂದರ್ಭ ವಾಹನಗಳ ತಾಂತ್ರಿಕ ನಿರ್ವಹಣೆಯ ಜವಾಬ್ದಾರಿ ವಹಿಸಿದರು.