ಮಡಿಕೇರಿ ಮಾ.20 : ಕೊಡಗು ಗೌಡ ವಿದ್ಯಾ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಂಬೇಕಲ್ಲು ನವೀನ್ ಕುಶಾಲಪ್ಪ 1,118 ಮತ ಪಡೆದು ಜಯಗಳಿಸಿದ್ದಾರೆ.
ಎದುರಾಳಿ ಕಟ್ಟೆಮನೆ ಸೋನಾ 949 ಮತ ಪಡೆದು ಪರಾಜಿತಗೊಂಡಿದ್ದಾರೆ.
ನಗರದ ಕೊಡಗು ಗೌಡ ಸಮಾಜ ಆವರಣದಲ್ಲಿ 6 ಮತಗಟ್ಟೆಗಳಲ್ಲಿ ಮತದಾನ ನಡೆಯಿತು.
5,100 ಸದಸ್ಯರ ಪೈಕಿ 2088 ಸದಸ್ಯರು ಮತದಾನ ಮಾಡಿದರು. ಇದರಲ್ಲಿ 38 ಮತಗಳು ಅಸಿಂಧುಗೊಂಡವು.
ಅಧ್ಯಕ್ಷ, ಉಪಾಧ್ಯಕ್ಷ, ಕೋಶಾಧಿಕಾರಿ ಪ್ರತಿ ಸ್ಥಾನಕ್ಕೆ ಇಬ್ಬರು ಹಾಗೂ ಉಳಿದ 6 ನಿರ್ದೇಶಕ ಸ್ಥಾನಕ್ಕೆ ಒಟ್ಟು 12 ಮಂದಿ ಸ್ಪರ್ಧಿಸಿದ್ದು, ಕಾರ್ಯದರ್ಶಿಯಾಗಿ ಪೇರಿಯನ ಉದಯಕುಮಾರ್, ಜಂಟಿ ಕಾರ್ಯದರ್ಶಿಯಾಗಿ ತಳೂರು ಕೆ.ದಿನೇಶ್ ಕುಮಾರ್, ನಿರ್ದೇಶಕರುಗಳಾಗಿ (ಮಹಿಳಾ ಮೀಸಲು) ಕೆದಂಬಾಡಿ ಕಾಂಚನ ಕೀರ್ತನ್, ಪಾಂಡನ ಪುಷ್ಪವೇಣಿ ಪ್ರಕಾಶ್, ಪುದಿಯನೆರವನ ರೇವತಿ ರಮೇಶ್ ಅವಿರೋಧವಾಗಿ ಆಯ್ಕೆಗೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ಅಮೆ ಸಿ ಸೀತಾರಾಮ 1109 ಮತ ಪಡೆದು ಜಯಗಳಿಸಿದರೆ, ಕೆದಂಬಾಡಿ ಎಸ್.ಕೀರ್ತಿಕುಮಾರ್ 945 ಮತದಿಂದ ಸೋಲು ಅನುಭವಿಸಿದರು.
ಕೋಶಾಧಿಕಾರಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಳೇರಮ್ಮನ ಎನ್.ಲತಾ 1045 ಮತಗಳಿಸಿ ಗೆದ್ದರೆ, ಪೈಕೇರ ಮನೋಹರ ಮಾದಪ್ಪ, 1015 ಅಲ್ಪಮತಗಳಿಂದ ಪರಭಾವಗೊಂಡರು.
ನಿದೇರ್ಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಈರಪ್ಪ ಎಸ್.ಸೂದಬ (1421 ಮತ), ಕುಂಭಗೌಡಬ ಡಿ.ವಿನೋದ್ ಕುಮಾರ್ (1299), ದೇವಂಗೋಡಿ ಹರ್ಷ (1294), ಜ್ಯೋತಿಶಂಕರ ಮೊಟ್ಟನ (1227), ಪರಿಚನ ಸತೀಶ್ (1216) ಮೂಲೆಮಜಲು ಮನೋಜ್ ಕುಮಾರ್ (1105), ಚೊಕ್ಕಾಡಿ ಅಪ್ಪಯ್ಯ (1071) ಗೆಲವು ಸಾಧಿಸಿದರು.
ಉಳಿದಂತೆ ಸ್ಪರ್ಧಾ ಕಣದಲ್ಲಿದ್ದ ಹರೀಶ್ ಊರುಬೈಲು (1000), ನಡುಮನೆ ಪವನ್ (987), ಚೋಂಡಿರ ಪ್ರಕಾಶ್ ಕಾರ್ಯಪ್ಪ (903), ಬಾಕಿಲನ ಸಂಜೀವಕುಮಾರ್ (881), ಪಂಜಿಕಲ್ಲು ಎ¸ಲ್.ಸುರೇಶ್ (807) ಪರಾಜಿತಗೊಂಡರು.
ಚುನಾವಣಾಧಿಕಾರಿಯಾಗಿ ಕಾಳೇರಮ್ಮನ ಗೋಪಾಲ ಹಾಗೂ ಸಹಾಯಕರಾಗಿ ದೇವಜನ ಮೋಹನ್, ದಿವಾಕರ್ ಸೇರಿದಂತೆ ಶಿಕ್ಷಕರು ಕಾರ್ಯನಿರ್ವಹಿಸಿದರು.















