ಮಡಿಕೇರಿ ಮಾ.25 : ಸಾಧಿಸುವ ಛಲ ಇದ್ದರೆ ಖಂಡಿತವಾಗಿಯೂ ಉದ್ದೇಶಿತ ಗುರಿಯನ್ನು ಅಂದುಕೊಂಡಂತೆ ತಲುಪಲು ಸಾಧ್ಯವಿದೆ, ಕೂಡಿಗೆ ಕ್ರೀಡಾಶಾಲೆಯ ನೂರಾರು ವಿದ್ಯಾಥಿ೯ಗಳು ಶಿಕ್ಷಣದೊಂದಿಗೆ ಕ್ರೀಡೆಯಲ್ಲಿಯೂ ಸಾಧನೆ ಮಾಡಿ ಮಾದರಿ ವಿದ್ಯಾಥಿ೯ಗಳಾಗಿದ್ದಾರೆ ಎಂದು ಕೂಡಿಗೆ ಕ್ರೀಡಾಶಾಲೆಯ ನಿವೖತ್ತ ಪ್ರಾಂಶುಪಾಲೆ ಕುಂತಿ ಬೋಪಯ್ಯ ಹೇಳಿದ್ದಾರೆ.
ಕೂಡಿಗೆ ಕ್ರೀಡಾಶಾಲೆಯಲ್ಲಿ 36 ಸುಧೀಘ೯ ವಷ೯ಗಳ ಕಾಲ ಶಿಕ್ಷಕಿಯಾಗಿ, ಪ್ರಾಂಶುಪಾಲೆಯಾಗಿ ಕಾಯ೯ನಿವ೯ಹಿಸಿದ್ದ ಕುಂತಿ ಬೋಪಯ್ಯ ಅವರ ಶೈಕ್ಷಣಿಕ ಸಾಧನೆ ಕುರಿತಾಗಿ ನಿಮಾ೯ಣಗೊಂಡಿರುವ ಕುಂತಿ ಟೀಚರ್ ಸಾಕ್ಷ್ಯ ಚಿತ್ರ ಪ್ರದಶ೯ನದ ಸಂದಭ೯ ಕ್ರೀಡಾಶಾಲೆ ವಿದ್ಯಾಥಿ೯ಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪೊಲೀಸ್, ಅಂಚೆ, ರೈಲ್ವೇಸ್, ತೆರಿಗೆ , ಕಂದಾಯ, ಅರಣ್ಯ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ಕ್ರೀಡಾಶಾಲೆಯ ವಿದ್ಯಾಥಿ೯ಗಳು ಉನ್ನತ ಹುದ್ದೆಯಲ್ಲಿದ್ದಾರೆ. ಅನೇಕರು ಕ್ರೀಡಾಕ್ಷೇತ್ರದಲ್ಲಿಯೇ ಉನ್ನತ ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ಪ್ರಮುಖ ಕಾರಣವಾಗಿ ಕ್ರೀಡಾಶಾಲೆಯ ಉತ್ತಮ ಶಿಕ್ಷಣ ವ್ಯವಸ್ಥೆಯಿದೆ ಎಂದು ಕುಂತಿಬೋಪಯ್ಯ ಹೆಮ್ಮೆಯಿಂದ ನುಡಿದರು. ಕೂಡಿಗೆ ಕ್ರೀಡಾಶಾಲೆಯಲ್ಲಿ ಶಿಕ್ಷಣ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿದ ಅನೇಕ ವಿದ್ಯಾಥಿ೯ಗಳು ನಾಡಿನ ಇತರ ವಿದ್ಯಾಥಿ೯ಗಳಿಗೂ ಪ್ರೇರಣೆಯಾಗಿದ್ದಾರೆ ಎಂದೂ ಅವರು ಹೇಳಿದರು. ಪೋಷಕರಿಗೆ, ಶಿಕ್ಷಕರಿಗೆ, ಶಾಲೆಗೆ ಕೀತಿ೯ ತರುವಂಥ ಸಾಧನೆ ಮಾಡಿ ಎಂದೂ ಕುಂತಿ ಹಾರೈಸಿದರು.
ಕುಂತಿ ಟೀಚರ್ ಸಾಕ್ಷ್ಯ ಚಿತ್ರದ ನಿಮಾ೯ಪಕ, ನಿದೇ೯ಶಕ ಅನಿಲ್ ಎಚ್.ಟಿ. ಮಾತನಾಡಿ, ಕ್ರೀಡಾಶಾಲೆಗೆ ಸುಧೀಘ೯ ಇತಿಹಾಸ ಇದೆಯಾದರೂ ನಾಡಿನ ಬಹುತೇಕ ಜನರಿಗೆ ಕ್ರೀಡಾಶಾಲೆಯ ಮಹತ್ವದ ಅರಿವಿಲ್ಲ. ಹೀಗಾಗಿ ಕುಂತಿ ಟೀಚರ್ ಸಾಧನೆಯೊಂದಿಗೇ ಕ್ರೀಡಾಶಾಲೆಯ ಹಿರಿಮೆಗಳನ್ನೂ ಸಾಕ್ಷ್ಯ ಚಿತ್ರದಲ್ಲಿ ದಾಖಲಿಸಲಾಗಿದೆ ಎಂದರಲ್ಲದೇ, ಸಾಧಕರ ಸಾಧನೆಯ ಹಿಂದಿನ ಶ್ರಮ ಬಿಂಬಿಸುವ ಇಂಥ ಚಿತ್ರಗಳು ವಿದ್ಯಾಥಿ೯ಗಳಿಗೂ ಮಾದರಿಯಾಗಿ ಮುಂದೆ ಸಾಧನೆ ತೋರಲು ಪ್ರೇರಣೆಯಾದರೆ ಚಿತ್ರ ನಿಮಾ೯ಣದ ಹಿಂದಿನ ಶ್ರಮ ಸಾಥ೯ಕ ಎಂದರು.
ಕ್ರೀಡಾಶಾಲೆಯ ಪ್ರಾಂಶುಪಾಲ ದೇವಕುಮಾರ್ ಮಾತನಾಡಿ, ಕ್ರೀಡಾಶಾಲೆಯೊಂದರಲ್ಲಿಯೇ ಸುಧೀಘ೯ ಸೇವೆ ಸಲ್ಲಿಸಿದ್ದ ಕುಂತಿ ಟೀಚರ್ ಕಾಯ೯ಸಾಧನೆ ಬಿಂಬಿಸುವ ಈ ಸಾಕ್ಷ್ಯ ಚಿತ್ರ ವಿಭಿನ್ನ ಪ್ರಯತ್ನವಾಗಿದ್ದು ಮನೋಜ್ಞವಾಗಿ ಮೂಡಿಬಂದಿದೆ. ಅತ್ಯುತ್ತಮವಾಗಿ ಮೂಡಿಬಂದಿರುವ ಸಾಕ್ಷ್ಯ ಚಿತ್ರ ಕ್ರೀಡಾಶಾಲೆಗೂ ಹಿರಿಮೆ ತಂದಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಾಯ೯ಕ್ರಮದಲ್ಲಿ ಚುಟುಕು ಕವಿ ಹಾ.ತಿ.ಜಯಪ್ರಕಾಶ್, ಲೇಖಕಿ ಲೀಲಾ ದಯಾನಂದ್, ಲತಾ ಗಣಿಪ್ರಸಾದ್ ಹಾಜರಿದ್ದು ಸಾಕ್ಷ್ಯ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 50 ನಿಮಿಷಗಳ ಕುಂತಿ ಟೀಚರ್ ಸಾಕ್ಷ್ಯ ಚಿತ್ರವನ್ನು ಕ್ರೀಡಾಶಾಲೆಯ ವಿದ್ಯಾಥಿ೯ಗಳಿಗೆ ಪ್ರದಶಿ೯ಸಲಾಯಿತು.