ಮಡಿಕೇರಿ ಏ.1 : ಮಡಿಕೇರಿ ಕ್ಷೇತದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ನೋಟೀಸ್ ನೀಡಿದ್ದಾರೆ.
ಯಾವುದೇ ಪೂರ್ವಾನುಮತಿ ಪಡೆಯದೆ ಸಾಮಾಜಿಕ ಜಾಲತಾಣದ ಫೇಸ್ ಬುಕ್ ಮೂಲಕ ರಾಜಕೀಯ ಪಕ್ಷದ ಚಿಹ್ನೆಯನ್ನು ಬಳಸಿ ಶ್ರೀ ಶಿವಕುಮಾರ ಸ್ವಾಮಿಗಳ ಜಯಂತಿಯoದು ಶತಕೋಟಿ ನಮನ ಮತ್ತು ಡಾ.ಕೇಶವ ಬಲರಾಂ ಹೆಗ್ಡೆವಾರ್ ಗುರೂಜಿ ಅವರ ಜಯಂತಿಯoದು ಗೌರವಪೂರ್ಣ ಪ್ರಣಾಮಗಳು ಎಂದು ಶುಭಾಶಯ ಕೋರಿರುವ ಪೋಸ್ಟ್ ನ್ನು ಹಂಚಿಕೊoಡಿರುವುದರಿoದ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ನೋಟೀಸ್ ನೀಡಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಉತ್ತರ ನೀಡುವಂತೆ ತಿಳಿಸಲಾಗಿದೆ.










