ಸುಂಟಿಕೊಪ್ಪ ಏ.3 : ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀ ಮುತ್ತಪ್ಪ ಮತ್ತು ಪರಿವಾರ ದೇವರುಗಳ 55ನೇ ವರ್ಷದ ತೆರೆ ಮಹೋತ್ಸವವು ಏ.15 ರಿಂದ 17 ರವರೆಗೆ ನಡೆಯಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.
ಏ.15 ರಂದು ಬೆಳಿಗ್ಗೆ 6.45 ಗಂಟೆಗೆ ಗಣಪತಿ ಹವನ, 7.15 ಗಂಟೆಗೆ ಶುದ್ಧಿ ಪುಣ್ಯಾಹ, 7.30 ಗಂಟೆಗೆ ಬಾವುಟ ಏರಿಸುವುದು, ಸಂಜೆ 4 ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವಿಕೆ, ರಾತ್ರಿ 5 ಗಂಟೆಗೆ ಶ್ರೀ ಮುತ್ತಪ್ಪ ವೆಳ್ಳಾಟಂ, 8 ಗಂಟೆಗೆ ಚಂಡೆಮೇಳ ನಡೆಯಲಿದೆ.
ಏ.16 ರಂದು ಬೆಳಿಗ್ಗೆ 7 ಗಂಟೆಗೆ ವಾದ್ಯಮೇಳ, ಮಧ್ಯಾಹ್ನ 12 ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವಿಕೆ, 2 ಗಂಟೆಗೆ ಶ್ರೀ ಶಾಸ್ತಪ್ಪನ ವೆಳ್ಳಾಟಂ, 3 ಗಂಟೆಗೆ ಶ್ರೀ ಗುಳಿಗನ ವೆಳ್ಳಾಟಂ, ಸಂಜೆ 4 ಗಂಟೆಗೆ ಅಡಿಯರ ಮೆರವಣಿಗೆ ನಡೆಯಲಿದೆ.
ಸಂಜೆ 5 ಗಂಟೆಗೆ ಶ್ರೀ ಮುತ್ತಪ್ಪ ವೆಳ್ಳಾಟಂ, 6 ಗಂಟೆಗೆ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ರಕ್ತ ಚಾಮುಂಡಿ ವೆಳ್ಳಾಟಂ, 7 ಗಂಟೆಗೆ ಶ್ರೀ ವಸೂರಿಮಾಲೆ ಸ್ನಾನಕ್ಕೆ ಹೊರಡಲಿದೆ.
ರಾತ್ರಿ 8 ಗಂಟೆಗೆ ಶ್ರೀ ವಿಷ್ಣುಮೂರ್ತಿ ವೆಳ್ಳಾಟಂ, 10 ಗಂಟೆಗೆ ಶ್ರೀ ವಸೂರಿಮಾಲೆ ಮೆರವಣಿಗೆ, 11 ಗಂಟೆಗೆ ಕಳಿಗಪಾಟ್, ಅಂದಿವೇಳ ಕಳಸಂ ಸ್ವೀಕರಿಸುವುದು, ವಳ್ಳಕಟ್ಟ್, 1 ಗಂಟೆಗೆ ಶ್ರೀ ಗುಳಿಗನ ಕೋಲ, 2 ಗಂಟೆಗೆ ಶ್ರೀ ಶಾಸ್ತಪ್ಪನ ಕೋಲ, ಬೆಳಗಿನ ಜಾವ 4 ಗಂಟೆಗೆ ಶ್ರೀ ತಿರುವಪ್ಪನ ಕೋಲ, 5 ಗಂಟೆಗೆ ಗಂಭೀರ ಪಟಾಕಿ ಜರುಗಲಿದೆ.
ಏ.17 ರಂದು ಬೆಳಿಗ್ಗೆ 7 ಗಂಟೆಗೆ ಶ್ರೀ ರಕ್ತ ಚಾಮುಂಡಿಕೋಲ, 8 ಗಂಟೆಗೆ ಶ್ರೀ ಮುತ್ತಪ್ಪ ಮತ್ತು ಶ್ರೀ ತಿರುವಪ್ಪ ದೇವರ ಪಳ್ಳಿವೇಟ, 9 ಗಂಟೆಗೆ ಶ್ರೀ ವಿಷ್ಣುಮೂರ್ತಿಕೋಲ, 10 ಗಂಟೆಗೆ ಶ್ರೀ ಚಾಮುಂಡೇಶ್ವರಿ ಕೋಲ, 11 ಗಂಟೆಗೆ ಶ್ರೀ ವಸೂರಿ ಮಾಲೆ ಕೋಲ, ಮಧ್ಯಾಹ್ನ 12 ಗಂಟೆಗೆ ಗುರುಶ್ರೀ ದರ್ಪಣ, ಅಪರಾಹ್ನ 2 ಗಂಟೆಗೆ ಬಾವುಟ ಇಳಿಸಲಾಗುವುದೆಂದು ಶ್ರೀ ಚಾಮುಂಡೇಶ್ವರಿ ಹಾಗೂ ಮುತ್ತಪ್ಪ ದೇವಾಲಯ ಸಮಿತಿ ಆಡಳಿತ ಮಂಡಳಿಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.









