ಮಡಿಕೇರಿ ಏ.10 : ಸಿರಿಗನ್ನಡ ವೇದಿಕೆ ಕೊಡಗು ಹಾಗೂ ಮಡಿಕೇರಿ ಸಿರಿಗನ್ನಡ ವೇದಿಕೆ ಮಹಿಳಾ ಘಟಕದ ವತಿಯಿಂದ ಏ.13 ರಂದು ಪದಾಧಿಕಾರಿಗಳ ಪದಗ್ರಹಣ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ನಡೆಯಲಿದೆ.
ನಗರದ ಭಾರತೀಯ ವಿದ್ಯಾ ಭವನದಲ್ಲಿ ಬೆಳಿಗ್ಗೆ 10.30 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಸಿರಿಗನ್ನಡ ವೇದಿಕೆ ರಾಜ್ಯ ಸಮಿತಿ ಕಾರ್ಯಾಧ್ಯಕ್ಷರು ಹಾಗೂ ವಿಶ್ವಾಸಿ ಮಂಡಳಿ ಟ್ರಸ್ಟಿ ಡಾ.ಸೌಗಂಧಿಕಾ ವಿ. ಜೋಯಿಸ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಾಹಿತಿ, ನಿರ್ಮಾಪಕರು, ನಟಿ ಹಾಗೂ ಸಿರಿಗನ್ನಡ ವೇದಿಕೆ ಮಡಿಕೇರಿ ತಾಲ್ಲೂಕು ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ವಹಿಸಲಿದ್ದಾರೆ.
ಅತಿಥಿಗಳಾಗಿ ಸುಳ್ಯ ಕೆ.ವಿ.ಜಿ.ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರು ಹಾಗೂ ನಗರದ ಇ.ಎನ್.ಟಿ. ವರ್ಟಿಗೋ ಕ್ಲಿನಿಕ್‍ನ ಸಮಾಲೋಚಕರಾದ ಡಾ. ಮೋಹನ್ ಅಪ್ಪಾಜಿ ಕೋಲೆಯಂಡ, ವಿರಾಜಪೇಟೆ ತೂಕ್ ಬೊಳಕ್ ಪತ್ರಿಕೆಯ ಸಂಪಾದಕ ಮುಲ್ಲೇಂಗಡ ಮಧೋಷ್ ಪೂವಯ್ಯ, ಶಕ್ತಿ ದಿನಪತ್ರಿಕೆಯ ಹಿರಿಯ ಉಪಸಂಪಾದಕ, ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಕುಡೆಕಲ್ ಸಂತೋಷ್ ಪಾಲ್ಗೊಳ್ಳಲಿದ್ದು, ಗೌರವಾಧ್ಯಕ್ಷರಾಗಿ ಅಲ್ಲಾರಂಡ ರಂಗಚಾವಡಿ ಅಧ್ಯಕ್ಷರು ಹಾಗೂ ಕೊಡಗು ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ, ಪಂಚಭಾಷಾ ಸಾಹಿತಿ, ಕವಯಿತ್ರಿ, ಸಿರಿಗನ್ನಡ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಉಳುವಂಗಡ ಕಾವೇರಿ ಉದಯ ಭಾಗವಹಿಸಲಿದ್ದಾರೆ.
ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ವಹಿಸಲಿದ್ದು, ಉಳುವಂಗಡ ಕಾವೇರಿ ಉದಯ, ಮಲ್ಲಂಡ ಶ್ರುತಿಯ ಮುದ್ದಪ್ಪ, ಈರಮಂಡ ಹರಿಣಿ ವಿಜಯ್, ಅಮ್ಮಾಟಂಡ ವಿಂದ್ಯ ದೇವಯ್ಯ, ಮಲ್ಲಮಾಡ ಶ್ಯಾಮಲ ಸುನಿಲ್, ಮುಕ್ಕಾಟಿರ ಮೌನಿ ನಾಣಯ್ಯ, ಚೆಟ್ಟೋಳಿರ ಶರತ್ ಸೋಮಣ್ಣ, ಉದಿಯಂಡ ಜಯಂತಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಐಮುಡಿಯಂಡ ರಾಣಿ ಮಾಚಯ್ಯ, ಕೊಡವ ಮತ್ತು ಕನ್ನಡ ಸಿನಿಮಾನಿರ್ಮಾಪಕಿ ಹಾಗೂ ನಿರ್ದೇಶಕಿ ಕೊಟ್ಟುಕತ್ತೀರಾ ಯಶೋಧ ಪ್ರಕಾಶ್, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಡಾ.ಕೋರನ ಸರಸ್ವತಿ ಪ್ರಕಾಶ್ ಅವನರನ್ನು ಸನ್ಮಾನಿಸಿ ಗೌರವಿಸಲಾಗುವುದು. ಇದೇ ಸಂದರ್ಭ ಗಣ್ಯರಿಂದ ಕವನ ಸಂಕಲನ ಬಿಡುಗಡೆಯಾಗಲಿದೆ.
ಕಿಗ್ಗಾಲ್ ಎಸ್. ಗಿರೀಶ್, ಅನಂತಶಯನ, ವೈಲೇಶ್, ಚೆಕ್ಕೇರ ತ್ಯಾಗರಾಜ್ ಅಪ್ಪಯ್ಯ, ಚನ್ನಪಂಡ ರಘು ಪೂಣಚ್ಚ, ಕೆ.ಜಿ.ರಮ್ಯಾ, ಕುಕ್ಕನೂರು ರೇಷ್ಮಾ ಮನೋಜ್, ಎಲಿಜಬೆತ್ ಲೋಬೊ, ಕೆ.ಶೋಭಾ ರಕ್ಷಿತ್, ಚಿತ್ರ ವೇಣುಗೋಪಾಲ್, ಕೂತಂಡ ಪೂಜಾ ಮುದ್ದಪ್ಪ, ಗೀತಾಂಜಲಿ ಅರುಣ್, ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ಕವಿಗೋಷ್ಠಿ ನಡೆಸಿಕೊಡಲಿದ್ದಾರೆ.