ಸುಂಟಿಕೊಪ್ಪ ಏ.10 : ಮಳ್ಳೂರು ಗ್ರಾಮದ ಕೊರಗಜ್ಜ ದೈವ ಸ್ಥಾನದಲ್ಲಿ ಪ್ರಥಮ ವರ್ಷದ ನೇಮೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.
ನಾಕೂರು ಶಿರಂಗಾಲ ವ್ಯಾಪ್ತಿಯ ಮಳ್ಳೂರು ಗ್ರಾಮದಲ್ಲಿ ಕೊರಗ, ತನಿಯ, ಕೊರಗಜ್ಜ ಮೂರು ದೈವಗಳ ಕೋಲ ನೆರವೇರಿತು.
ಭಾನುವಾರ ರಾತ್ರಿ 10 ಗಂಟೆಗೆ ಪ್ರಾರಂಭವಾದ ಕೋಲವು ಇಂದು ಮುಂಜಾನೆಯವರೆಗೆ ನಡೆಯಿತು.
ಮಳೂರು, ನಾಕೂರು ಶಿರಂಗಾಲ, 7ನೇ ಹೊಸಕೋಟೆ, ಸುಂಟಿಕೊಪ್ಪ ಸೇರಿದಂತೆ ವಿವಿಧ ಗ್ರಾಮದ ಭಕ್ತಾಧಿಗಳು ಆಗಮಿಸಿ ಕೊರಗಜ್ಜನಿಗೆ ಹರಕೆ ಸಲ್ಲಿಸಿದರು.
ನೆರೆದಿದ್ದ ನೂರಾರು ಭಕ್ತರಿಗೆ ಗಂಧ ಪ್ರಸಾದ ವಿತರಿಸಲಾಯಿತು.









