ಸಿದ್ದಾಪುರ ಏ.10 : ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಶ್ರೀಸಾಮಾನ್ಯರಿಗೆ ಧೈರ್ಯ ತುಂಬಿ, ಸಮಾಜ ಘಾತುಕ ಶಕ್ತಿಗಳಿಗೆ ಎಚ್ಚರಿಕೆ ನಿಡುವ ಹಿನ್ನೆಲೆಯಲ್ಲಿ ಇಂದು ಪಟ್ಟಣದಲ್ಲಿ ಅರೆ ಸೇನಾ ಪಡೆ ಮತ್ತು ಜಿಲ್ಲಾ ಪೊಲೀಸರಿಂದ ಪಥ ಸಂಚಲನ ನಡೆಯಿತು.
ಚುನಾವಣೆ ಸಮದರ್ಭ ಸಮಾಜ ಘಾತುಕ ಶಕ್ತಿಗಳು ಶಾಂತಿ ಕದಡಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆನ್ನುವ ಸ್ಪಷ್ಟ ಸಂದೇಶ ಸಾರುವ ನಿಟ್ಟಿನಲ್ಲಿ ನೆಲ್ಲಿಹುದಿಕೇರಿಯಿಂದ ಸಿದ್ದಾಪುರದವರೆಗೆ ನಡೆದ ಪಥ ಸಂಚಲನದಲ್ಲಿ ನೂರಕ್ಕೂ ಹೆಚ್ಚಿನ ಪೊಲೀಸ್ ಮತ್ತು ಅರೆ ಸೇನಾ ಪಡೆದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.









