ಮಡಿಕೇರಿ ಏ.24 : ಮಡಿಕೇರಿ ತಾಲ್ಲೂಕಿನ ಮೇಕೇರಿ ಸಮೀಪದ ಬಿಳಿಗೇರಿ ಗ್ರಾಮದ ಶ್ರೀ ಅರ್ಧನಾರೀಶ್ವರ ದೇವಾಲಯದ ವಾರ್ಷಿಕ ಉತ್ಸವ ಏ.27 ರಿಂದ ಮೇ1ರ ವರೆಗೆ ನಡೆಯಲಿದೆ.
ಏ.27ರಂದು ಬೆಳಿಗ್ಗೆ 7 ಗಂಟೆಗೆ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ಕಗ್ಗೋಡ್ಲುವಿನ ಶ್ರೀ ಬೊಟ್ಲಪ್ಪ ದೇವಾಲಯದಿಂದ ತೀರ್ಥ ತೆಗೆದುಕೊಂಡು ಬರುವುದು, ಗಣಪತಿ ಹೋಮ, ತೀರ್ಥ ಅಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 6 ಗಂಟೆಗೆ ಪ್ರಾರ್ಥನೆ, ಭಂಡಾರ ತರುವುದು, ಅಂದಿ ಬೆಳಕು, ಶ್ರೀ ದೇವರ ಬಲಿ, ಪ್ರಸಾದ ವಿತರಣೆ ನಡೆಯಲಿದೆ.
ಏ.28 ರಂದು ಬೆಳಿಗ್ಗೆ 5ಗಂಟೆಗೆ ದೇವರು ಬಲಿ ಬರುವುದು, 10 ಗಂಟೆಗೆ ಹಬ್ಬದ ಕಟ್ಟುಮುರಿಯುವುದು, ಶ್ರೀ ದೇವರ ನೃತ್ಯ ಬಲಿ, ವಸಂತ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 5 ಗಂಟೆಗೆ ದೇವರು ಜಳಕಕ್ಕೆ ಹೋಗುವುದು, ನಂತರ ದೇವರ ನೃತ್ಯ ಬಲಿ, ಮಹಾಪೂಜೆ, ಪ್ರಸಾದ ವಿತರಣೆಗಳು ನಡೆಯಲಿವೆ.
ಏ.29 ರಂದು ಬೆಳಿಗ್ಗೆ 10 ಗಂಟೆಗೆ ಗಣಪತಿ ಹೋಮ, ಶುದ್ಧ ಕಲಶ, ಮಹಾಪೂಜೆ, ಪ್ರಸಾದ ವಿತರಣೆ, ಏ.30 ರಂದು ಸಂಜೆ 6ಗಂಟೆಗೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ತೋತ ಹೊರಡುವುದು, ಶ್ರೀ ಅರ್ಧನಾರೀಶ್ವರ ದೇವಾಲಯದಿಂದ ದೀಪ ತರುವುದು, ಮೇಲೇರಿಗೆ ಅಗ್ನಿ ಸ್ಪರ್ಶ, ಕೋಲ ಕಾರ್ಯಕ್ರಮಗಳು ನಡೆಯಲಿದೆ.
ಮೇ 1 ರಂದು ಬೆಳಿಗ್ಗೆ 9-30ಕ್ಕೆ ಶ್ರೀ ಅಜ್ಜಪ್ಪ ಕೋಟದಲ್ಲಿ ಅಜ್ಜಪ್ಪ ದೇವರ ಕೋಲ, 10-30ಕ್ಕೆ ಶ್ರೀ ವಿಷ್ಣುಮೂರ್ತಿ ಮೇಲೇರಿ, ಪ್ರಸಾದ ವಿತರಣೆ,ಮಧ್ಯಾಹ್ನ 2-30ಕ್ಕೆ ದೇವರಿಗೆ ಬೇಟೆ ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನ ಸಮಿತಿ ಮನವಿ ಮಾಡಿದೆ.