ಮಡಿಕೇರಿ ಏ.24 : ಮಡಿಕೇರಿ ನಗರದ ವಾರ್ಡ್ ನಂಬರ್ 20ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂತರ್ ಗೌಡ ಪರ ಬಿರುಸಿನ ಪ್ರಚಾರ ನಡೆಯಿತು.
ಬೂತ್ ಅಧ್ಯಕ್ಷ ರವಿಗೌಡ ಅವರ ನೇತೃತ್ವದಲ್ಲಿ ನಗರದ ವಾರ್ಡ್ ನಂಬರ್ 20ರ ಹೊಸ ಬಡಾವಣೆ ಹಾಗೂ ಚಾಮುಂಡೇಶ್ವರಿ ನಗರದ ಮನೆಮನೆಗಳಿಗೆ ತೆರಳಿ ಪಕ್ಷದ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡಿ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಡಾ.ಮಂತರ್ ಗೌಡ ಅವರ ಗೆಲುವಿಗೆ ಸಹಕಾರ ನೀಡಿ ಈ ಬಾರಿ ಬದಲಾವಣೆ ಬಯಸುವಂತೆ ಮತದಾರರಲ್ಲಿ ಮನವಿ ಮಾಡಲಾಯಿತು.
ಈ ಸಂದರ್ಭ ಬೂತ್ ನ ಬಿ.ಎಲ್.ಎ ಗಳಾದ ಹೆಚ್.ಯು.ಲಿಲ್ಲಿ, ಕಾಂಗ್ರೆಸ್ ಮಹಿಳಾ ಪ್ರಧಾನ ಕಾರ್ಯದರ್ಶಿ ಮೀನಾಜ್ ಪ್ರವೀಣ್, ಸದಸ್ಯರುಗಳಾದ ಸತೀಶ್ ಪೈ, ರಮ್ಯಾ, ದೇವಕಿ ಹಾಗೂ ಹಲವು ಬೂತ್ ಸದಸ್ಯರು ಹಾಜರಿದ್ದರು.









