ಮಡಿಕೇರಿ ಏ.24 : ಕರ್ನಾಟಕ ವಿಧಾನಸಭಾ ಚುನಾವಣೆ-2023 ಹಿನ್ನೆಲೆಯಲ್ಲಿ ಮತದಾರರ ಶಿಕ್ಷಣ ಮತ್ತು ಜಾಗೃತಿ(ಸ್ವೀಪ್) ಕಾರ್ಯಕ್ರಮದಡಿ ಕೊಡಗು ಜಿಲ್ಲೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಕೊಡಗು ಜಿಲ್ಲಾಡಳಿತ, ಕೊಡಗು ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಸ್ತ್ರೀಶಕ್ತಿ ಒಕ್ಕೂಟಗಳ ವತಿಯಿಂದ ಏ. 29 ರಂದು ಪೊನ್ನಂಪೇಟೆ ಕೆಪಿಎಸ್ ಶಾಲೆಯಲ್ಲಿ, ಏ.30 ರಂದು ಮಡಿಕೇರಿ ಗಾಂಧಿ ಮೈದಾನದಲ್ಲಿ ಹಾಗೂ ಮೇ, 1 ರಂದು ಸೋಮವಾರಪೇಟೆಯ ಸ್ತ್ರೀಶಕ್ತಿ ಭವನದಲ್ಲಿ ಆಯಾಯ ದಿನಗಳಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 12 ಗಂಟೆವರೆಗೆ ರಂಗೋಲಿ ಸ್ಪರ್ಧೆ ನಡೆಯಲಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ತಿಳಿಸಿದ್ದಾರೆ.
ಸ್ಪರ್ಧೆಯ ವಿವರ ಇಂತಿದೆ: ಕೊಡಗು ಮತ್ತು ಮತದಾನ ವಿಷಯ ಕುರಿತಂತೆ ರಂಗೋಲಿ ರಚಿಸಬಹುದು. 18 ವರ್ಷ ಒಳಪಟ್ಟ ಹಾಗೂ 18 ವರ್ಷ ಮೇಲ್ಪಟ್ಟ ವಯೋಮಾನದವರಿಗೆ ಪ್ರತ್ಯೇಕವಾಗಿ 2 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಿರುತ್ತದೆ. ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ರಂಗೋಲಿ ಸ್ಪರ್ಧೆಗೆ ಅವಶ್ಯಕವಿರುವ ವಸ್ತುಗಳನ್ನು ಸ್ಪರ್ಧಿಗಳೇ ತರಬೇಕು. ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ವಿಷಯಗಳಿಗೆ ಅವಕಾಶವಿರುವುದಿಲ್ಲ. 1 ಗಂಟೆ ಕಾಲಾವಕಾಶವಿರುತ್ತದೆ.
ಏಪ್ರಿಲ್, 28 ರೊಳಗೆ ಸ್ಪರ್ಧಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ನೋಂದಣಿಗಾಗಿ ಪೊನ್ನಂಪೇಟೆ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ, ರಾಜೇಶ್ ಮೊ.ಸಂ.9902323174 ಹಾಗೂ ರಜನಿ ತಾಲ್ಲೂಕು ಅಧ್ಯಕ್ಷರು, ಸ್ತ್ರೀಶಕ್ತಿ ಒಕ್ಕೂಟ, ಪೊನ್ನಂಪೇಟೆ ಮೊ.ಸಂ.7760448363 ನ್ನು ಸಂಪರ್ಕಿಸಬಹುದು.
ನೋಂದಣಿಗಾಗಿ ಮಡಿಕೇರಿ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಟಿ.ಎಸ್.ಸೀತಾಲಕ್ಷ್ಮಿ ಮೊ.ಸಂ.9449534724/ 9108810782 ಹಾಗೂ ರೆಹನಾ ಸುಲ್ತಾನ್, ಜಿಲ್ಲಾಧ್ಯಕ್ಷರು, ಸ್ತ್ರೀ ಶಕ್ತಿ ಒಕ್ಕೂಟ, ಕೊಡಗು ಜಿಲ್ಲೆ ಮೊ.ಸಂ.8217511190 ಹಾಗೂ ಪುಷ್ಪಾವತಿ, ತಾಲ್ಲೂಕು ಅಧ್ಯಕ್ಷರು, ಮಡಿಕೇರಿ, ಸ್ತ್ರೀ ಶಕ್ತಿ ಒಕ್ಕೂಟ ಮೊ.ಸಂ.9483840871 ಹಾಗೂ ತಾರಾಮಣಿ, ಕಾರ್ಯದರ್ಶಿ, ಸ್ತ್ರೀಶಕ್ತಿ ಒಕ್ಕೂಟ ಮೊ.ಸಂ.9845232918 ನ್ನು ಸಂಪರ್ಕಿಸಬಹುದು.
ನೋಂದಣಿಗಾಗಿ ಸೋಮವಾರಪೇಟೆ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತನುಜಾ ಮೊ.ಸಂ.9980014890 ಹಾಗೂ ರೆಹನಾ ಸುಲ್ತಾನ್, ಜಿಲ್ಲಾಧ್ಯಕ್ಷರು, ಸ್ತ್ರೀಶಕ್ತಿ ಒಕ್ಕೂಟ, ಕೊಡಗು ಜಿಲ್ಲೆ ಮೊ.ಸಂ.8217511190 ಹಾಗೂ ಸುಮತಿ, ತಾಲ್ಲೂಕು ಅಧ್ಯಕ್ಷರು, ಸೋಮವಾರಪೇಟೆ ಸ್ತ್ರೀ ಶಕ್ತಿ ಒಕ್ಕೂಟ ಮೊ.ಸಂ.9449699627 ನ್ನು ಸಂಪರ್ಕಿಸಬಹುದು ಎಂದು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ತಿಳಿಸಿದ್ದಾರೆ.









