ಸೋಮವಾರಪೇಟೆ ಏ.24 : ತಾಲ್ಲೂಕಿನ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾದ ಶಾಂತಳ್ಳಿ ವ್ಯಾಪ್ತಿಯಲ್ಲಿ ಇದೀಗ ಬರದ ಛಾಯೆ ಆವರಿಸಿದೆ.
ತಾಲೂಕಿನ ಶಾಂತಳ್ಳಿ ಹೋಬಳಿಯ ಕೂತಿ ಗ್ರಾಮದ ನಾಗರತ್ನ ಅವರಿಗೆ ಸೇರಿದ ಏಲಕ್ಕಿ ತೋಟದ ಗಿಡಗಳು ಬಿಸಿಲ ಧಗೆಗೆ ಒಣಗಿ ಹೋಗಿವೆ.
ಸಮೀಪದ ಗ್ರಾಮಗಳಲ್ಲೂ ಕಾಫಿ, ಕರಿಮೆಣಸು ಸೇರಿದಂತೆ ಇತರ ಬೆಳೆಗಳು ಸಂಪೂರ್ಣ ನಾಶವಾಗಿದೆ. ಅಧಿಕ ಮಳೆಯಾಗುವ ಈ ಪ್ರದೇಶಗಳಲ್ಲಿಯೂ ಪ್ರಸಕ್ತ ಸಾಲಿನಲ್ಲಿ ವಾಡಿಕೆ ಮಳೆಯಾಗದೆ ಇರುವುದರಿಂದ ಬಿಸಿಲಿನ ತಾಪಮಾನ ಏರಿಕೆಯಿಂದಾಗಿ ಬೆಳೆಗಳು ನಾಶವಾಗಿವೆ.
ಕಾಫಿ ತೋಟಗಳು ಕೂಡ ಒಣಗಿ ಹೋಗಿರುವುರಿಂದ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರಕಾರಕ್ಕೆ ವರದಿ ನೀಡಬೇಕು. ಜಿಲ್ಲೆಯ ಇತರೆಡೆಗಳಲ್ಲಿಯೂ ಇದೇ ಪರಿಸ್ಥಿತಿ ಇರುವುದರಿಂದ ಕೊಡಗು ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕೆಂದು ಶಾಂತಳ್ಳಿ ಹೋಬಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.









