ಸುಂಟಿಕೊಪ್ಪ ಏ.25 : ಜಿಲ್ಲೆಯಲ್ಲಿ ಕಳೆದ ಕೆಲವು ದಿಗಳಿಂದ ಮೋಡ ಕವಿದ ವಾತಾವರಣವಿದ್ದು, ಜನ ಮಳೆಗಾಗಿ ಎದುರು ನೋಡುತ್ತಿದ್ದಾರೆ. ಇಂದು ಸುಂಟಿಕೊಪ್ಪ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳಲ್ಲಿ ಸುರಿದ ಮಳೆಯಿಂದಾಗಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ನಾಕೂರು ಶಿರಂಗಾಲ, ಕಲ್ಲೂರು, ಕೊಡಗರಹಳ್ಳಿ, ಹೊಸಕೋಟೆ,ಗರಗಂದೂರು, ಮಾದಾಪುರ, ಹರದೂರು ಭಾಗಗಳಲ್ಲಿ ಅಂದಾಜು 1.5 ರಿಂದ 2.5 ಇಂಚುಗಳವರೆಗೆ ಮಳೆಯಾಗಿದೆ. ಸುಂಟಿಕೊಪ್ಪ ಗ್ರಾ.ಪಂ ವ್ಯಾಪ್ತಿಯ ಬಾವಿಗಳು ಬತ್ತಿದ್ದು, ಕುಡಿಯುವ ನೀರು ಪೂರೈಸಲು ವ್ಯತ್ಯಯವಾಗಿತ್ತು. ಇದೀಗ ಮಳೆಯಿಂದಾಗಿ ಜನ ಸಂತಸಗೊಂಡಿದ್ದಾರೆ.









