ಮಡಿಕೇರಿ ಏ.25 : ಕುಶಾಲನಗರ ಉಪ-ಕೇಂದ್ರದಿಂದ ಹೊರಹೋಗುವ ಸೋಮವಾರಪೇಟೆ 33ಕೆವಿ ವಿದ್ಯುತ್ ವಿತರಣಾ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ಏ.27 ಮತ್ತು 29 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಸೋಮವಾರಪೇಟೆ ವಿದ್ಯುತ್ ಉಪಕೇಂದ್ರದ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಗೌಡಳ್ಳಿ, ಶಾಂತಳ್ಳಿ, ಐಗೂರು, ಕರ್ಕಳ್ಳಿ, ಸೋಮವಾರಪೇಟೆ, ಗಣಗೂರು, ಬಾಣಾವಾರ, ಅಬ್ಬೂರುಕಟ್ಟೆ, ದೊಡ್ಡಮಳ್ತೆ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.









