ಮಡಿಕೇರಿ ಏ.27 : ಆಮ್ ಆದ್ಮಿ ಪಾರ್ಟಿಯ ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಸಿ.ಎಸ್.ರವೀಂದ್ರ ಪರ ಅಮ್ಮತ್ತಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಯಿತು.
ಸ್ಥಳೀಯ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಅಮ್ಮತ್ತಿ, ಇಂಜಿಲಗೆರೆ, ಸಿದ್ದಾಪುರ, ಪಾಲಿಬೆಟ್ಟ, ಕಾರ್ಮಾಡು ಕಡೆಗಳ ಮನೆ ಮನೆಗೆ ತೆರಳಿ ಪಕ್ಷದ ಯೋಜನೆಗಳ ಕರಪತ್ರವನ್ನು ನೀಡಿ ಅಭ್ಯರ್ಥಿಯ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಪಕ್ಷದ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ಹಾಗೂ ಮತ್ತಿರ ಕಾರ್ಯಕರ್ತರು ಹಾಜರಿದ್ದರು.









