ವಿರಾಜಪೇಟೆ ಏ.27 : ಪ್ರಸ್ತುತ ಜಗತ್ತು ನವನವೀನವಾದ ಆವಿಷ್ಕಾರಗಳನ್ನು ಎದುರು ನೋಡುತ್ತಿದೆ. ಯುವ ಜನತೆಯು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಜಗತ್ತಿನ ಆಶೋತ್ತರಗಳಿಗೆ ಸ್ಪಂದಿಸಲು ಚಿಂತನೆ ನಡೆಸಬೇಕು ಎಂದು ಮಂಗಳೂರಿನ ಯುವ ವಕೀಲ ಸಿ.ಎ.ಅನ್ವೇಶ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂತ ಅನ್ನಮ್ಮ ಕಾಲೇಜು ಸ್ನಾತಕೋತ್ತರ ವಿಭಾಗ, ಐಕ್ಯೂಎಸಿ ಮತ್ತು ವಾಣಿಜ್ಯಶಾಸ್ತø ವಿಭಾಗದ ವತಿಯಿಂದ ವಿಶ್ವ ಬೌದ್ಧಿಕ ಆಸ್ತಿ ಮತ್ತು ಹಕ್ಕುಗಳ ದಿನಾಚರಣೆಯ ಅಂಗವಾಗಿ ಕಾಲೇಜು ಸಭಾಂಗಣದಲ್ಲಿ ನಡೆದ ಬೌಧಿಕ ಆಸ್ತಿ ಮತ್ತು ಹಕ್ಕುಗಳ ರಾಷ್ಟøಮಟ್ಟದ ಕಾರ್ಯಗಾರವನ್ನು ಉದ್ಘಾಟಿಸಿ, ಉಪನ್ಯಾಸ ನೀಡಿದರು.
ಮನುಷ್ಯನ ಬೌದ್ಧಿಕ ಸಾಮಥ್ರ್ಯದಿಂದ ಸೃಷ್ಟಿಸಲ್ಪಟ್ಟ ಸೃಜನಾತ್ಮಕ ಮತ್ತು ಕ್ರಿಯಾತ್ಮಕ ಕ್ರಿಯೆಗಳನ್ನು ಬೌದ್ಧಿಕ ಸ್ವತ್ತುಗಳು ಅಥವಾ ಆಸ್ತಿಗಳೆಂದು ಹೇಳಬಹುದಾಗಿದೆ. ಯಾವುದೇ ಭೌತಿಕ ವಸ್ತುಗಿರುವ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯಗಳನ್ನು ಬೌದ್ಧಿಕ ಆಸ್ತಿ ಹೊಂದಿದ್ದು, ಈ ಕಾರಣ ಇದನ್ನು ಸ್ವತ್ತು ಅಥವಾ ಆಸ್ತಿ ಎಂದು ಪರಿಗಣಿಸಿ ಕಾನೂನಿನ ಮೂಲಕ ಬೌದ್ಧಿಕ ಆಸ್ತಿಯ ಹಕ್ಕುಗಳನ್ನು ಸಂರಕ್ಷಣೆ ಮಾಡಲಾಗುತ್ತಿದೆ. ಸಾಹಿತ್ಯ, ಕಾಲತ್ಮಕ ಕೃತಿಗಳು ( ಸಂಗೀತ, ಪೇಂಟಿಂಗ್, ಚಲನಚಿತ್ರ) ಹೀಗೆ ಹಲವು ವ್ಯಾಪಾರಿ, ಚಿಹ್ನೆಗಳು ವಿನ್ಯಾಸಗಳು ತಂತ್ರಾಂಶಗಳು, ದತ್ತಾಂಶಗಳು ಮುಂತಾದವುಗಳು ಬೌದ್ಧಿಕ ಆಸ್ತಿಯ ಹಕ್ಕಿನಡಿಯಲ್ಲಿ ಬರುತ್ತದೆ ಎಂದರು.
ಪ್ರಸ್ತುತ ಸಮಾಜದಲ್ಲಿ ಹಲವು ಬಗೆಯ ವಸ್ತುಗಳು ಮಾರುಕಟ್ಟೆಗೆ ಬರುತ್ತದೆ, ಆದರೆ ಗುಣಮಟ್ಟದ ವಸ್ತುಗಳು ನಾಗರಿಕರಿಗೆ ದೊರಕುವುದರಲ್ಲಿ ಸಂಶಯವಿದೆ. ಕಾರಣ ಮಾರುಕಟ್ಟೆಯಲ್ಲಿ ಒಂದೇ ರೀತಿಯ ಬಣ್ಣ ಬದಲಾವಣೆಯೊಂದಿಗೆ ಕಳಪೆ ಗುಣಮಟ್ಟದ ನಕಲಿ ವಸ್ತುಗಳು ಲಭ್ಯವಾಗಿರುವುದು. ಇದಕ್ಕೆ ಕಡಿವಾಣ ಎಂಬಂತೆ ಬೌದ್ಧಿಕ ಸ್ವತ್ತು ಮತ್ತು ಹಕ್ಕುಗಳ ಕಾನೂನು ಜಾರಿಗೆಯಾಗಿರುತ್ತದೆ ಸುಮಾರು 60 ವರ್ಷಗಳ ಹಿಂದೆ ವಿದೇಶಗಳಲ್ಲಿ ಕಾನೂನು ಜಾರಿಗೆ ಬಂದಿದೆ ಭಾರತದಲ್ಲಿ 50 ವರ್ಷಗಳಿಂದ ಕಾನೂನು ಜಾರಿಗೆಯಲ್ಲಿದೆ. ಓರ್ವ ವ್ಯಕ್ತಿ ತನ್ನ ಪರಿಶ್ರಮದಿಂದ ಹಲವು ವರ್ಷಗಳು ಅಧ್ಯಯನ ನಡೆಸಿ ಹಲವು ಬಗೆಯ ಹೋರಾಟಗಳನ್ನು ನಡೆಸಿ ವಸ್ತು ಸೃಷ್ಟಿಗೊಳಿಸಿ ಮಾರುಕಟ್ಟೆಗೆ ಒಯ್ಯುತ್ತಾನೆ. ಸುಲಭ ದಾರಿಯಲ್ಲಿ ಹಣ ಸಂಪಾದನೆ ಮಾಡುವ ದೃಷ್ಟಿಯಲ್ಲಿ ದುರಳರು ವಸ್ತುವಿನ ನಕಲನ್ನು ಸೃಷ್ಟಿಸಿ ಮಾರುಕಟ್ಟೆಯಲ್ಲಿ ಹರಿಯಬಿಡುತ್ತಾರೆ ಇದು ದುರಾದೃಷ್ಟಕರ ಎಂದರು.
ಯುವ ಜನತೆ ಮಾರುಕಟ್ಟೆಯಲ್ಲಿ ಖರೀದಿಸುವ ವಸ್ತುಗಳ ಬಗ್ಗೆ ಜಾಗರೂಕರಾಗಬೇಕು ಎಂದು ಹೇಳಿದರು.
ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ ಪ್ರಾಸ್ತಾವಿಕ ಮಾತನಾಡಿ, ಸಮಾಜಕ್ಕೆ ಇಂದು ಬೌದ್ಧಿಕ ಆಸ್ತಿ ಮತ್ತು ಹಕ್ಕುಗಳನ್ನು ಸಂರಕ್ಷಣೆ ಮಾಡುವ ಅನಿವಾರ್ಯವಿದೆ. ವ್ಯಕ್ತಿಯು ತನ್ನ ಬೆವರಿನ ಕಣಕಣವನ್ನು ರಕ್ತವನ್ನಾಗಿಸಿ ವಸ್ತು ಸೃಷ್ಟಿ ಮಾಡುತ್ತಾನೆ. ಕಳ್ಳ ಮಾರ್ಗದಲ್ಲಿ ಹಣ ಮಾಡುವ ಉದ್ದೇಶದಿಂದ ಸೃಷ್ಟಿ ಮಾಡಿದ ವಸ್ತು ಅಥವಾ ಕೃತಿ ನಕಲಿಯಾಗಿ ಮಾರುಕಟ್ಟಯಲ್ಲಿ ಲಭ್ಯವಾಗುತ್ತದೆ ಇದಕ್ಕೆ ಕಡಿವಾಣ ಹಾಕಲು ಮತ್ತು ಜಾಗೃತಿ ಮೂಡಿಸಲು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮಡಿಕೇರಿ ಸರ್ಕಾರಿ ಅಭಿಯೋಜಕ, ವಕೀಲ ಅಮೃತ್ ಸೋಮಯ್ಯ ಮಾತನಾಡಿ, ಬುದ್ದಿವಂತಿಕೆಯಿಂದ ಸೃಷ್ಟಿಸಲಾಗಿರುವ ವಸ್ತುಗಳು, ಗ್ರಂಥಗಳು, ಕೃತಿಗಳು ಚಲನಚಿತ್ರಗಳು ಇನ್ನೂ ಹಲವು ಬಗೆಯು ಮನುಷ್ಯ ಸೃಷ್ಟಿತ ಆಸ್ತಿಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ತಪ್ಪುಗಳನ್ನು ಕಂಡು ಹಿಡಿದರು ಪ್ರಶ್ನೆ ಮಾಡುವ ಹಕ್ಕು ಸರ್ವರಿಗೂ ಲಭಿಸಿದೆ. ಅನ್ಯಾಯವಾಗಿದೆ ಎನ್ನುವವರು ಕಾನೂನಿನ ಮೊರೆಹೋಗಿ ನ್ಯಾಯವನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ವಿರಾಜಪೇಟೆ ವಕೀಲ ಬಿ.ಬಿ. ಮಾದಪ್ಪ ಬೌದ್ಧಿಕ ಆಸ್ತಿ ಮತ್ತು ಹಕ್ಕುಗಳ ಕಾನೂನು ಬಗ್ಗೆ ಉಪನ್ಯಾಸ ನೀಡಿದರು.
ಸಂತ ಅನ್ನಮ್ಮ ದೇವಾಲಯದ ಸಹಾಯಕ ಧರ್ಮಗುರು ರೆ.ಫಾ. ಐಸಾಕ್ ರತ್ನಾಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬೌದ್ಧಿಕ ಆಸ್ತಿ ಮತ್ತು ಹಕ್ಕುಗಳ ರಾಷ್ಟøಮಟ್ಟದ ಒಂದು ದಿನದ ಕಾರ್ಯಾಗಾರದಲ್ಲಿ ಸಂತ ಜೊನ್ಸ್ ಕಾಲೇಜು ಮೈಸೂರು, ಸಂತ ಫಿಲೋಮಿನ ಕಾಲೇಜು ಮೈಸೂರು, ಎನ್.ಎಂ.ಸಿ ಕಾಲೇಜು ಸುಳ್ಯ, ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ಮ್ಯನೇಜ್‍ಮೆಂಟ್ ಕಾಲೇಜು ಮಂಗಳೂರು, ಜೆ.ಎಸ್.ಎಸ್. ಮೈಸೂರು, ನೆರೆಯ ಕೇರಳ ರಾಜ್ಯದ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಕೊಡಗಿನ ವಿವಿಧ ಪದವಿ ಕಾಲೇಜಿನ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಕೆ.ಪಿ.ದೃಷ್ಯ, ಸಂತ ಅನ್ನಮ್ಮ ಪದವಿ ಕಾಲೇಜಿನ ಉಪನ್ಯಾಸಕರು, ಪದವಿ ಕಾಲೇಜಿನ ವಿದ್ಯಾರ್ಥಿಗಳು, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ವಿವಿಧ ಸ್ಥಳಗಳಿಂದ ಆಗಮಿಸಿದ ಪದವಿ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪದವಿ ಕಾಲೇಜು ಪ್ರಾಧ್ಯಾಪಕರಾದ ಮುತ್ತಮ್ಮ ಸರ್ವರನ್ನು ಸ್ವಾಗತಿಸಿದರು. ವಾಣಿಜ್ಯ ವಿಭಾಗ ಉಪನ್ಯಾಸಕರಾದ ಬಿ.ಡಿ.ಹೇಮಾ ಕಾರ್ಯಕ್ರಮ ನಿರೂಪಣೆ ಮಾಡಿದರು. ವಾಣಿಜ್ಯ ಶಾಸ್ತø ವಿಭಾಗದ ಉಪನ್ಯಾಸಕರಾದ ಶಿಲ್ಪ ಸರ್ವರನ್ನು ವಂದಿಸಿದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ








