ಮಡಿಕೇರಿ ಏ.27 : ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ಏ.29 ರಿಂದ ಮೇ 2ರ ವರೆಗೆ ಕ್ರೀಡೋತ್ಸವ ನಡೆಯಲಿದೆ ಎಂದು ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ತಿಳಿಸಿದ್ದಾರೆ.
ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಏ.29 ರಂದು ಪೂರ್ವಾಹ್ನ 10 ಗಂಟೆಗೆ ನಡೆಯಲಿರುವ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಮುಖ್ಯ ಅಥಿತಿಗಳಾಗಿ ಟ್ರೋಫಿ ದಾನಿಗಳಾದ ಮೇಜರ್ ಮಳ್ಳಡ ದೀಕ್ಷಿತ್ ದೇವಯ್ಯ, ಪೊಲೀಸ್ ಉಪ ನಿರೀಕ್ಷಕ ಹಾಗೂ ಮುಖ್ಯಮಂತ್ರಿ ಪದಕ ವಿಜೇತ ತುದಿಮಾಡ ಸವಿ, ಕ್ರೀಡಾ ಸಮಿತಿಯ ಅಧ್ಯಕ್ಷ ಪಡಿಞರಂಡ ಪ್ರಭುಕುಮಾರ್, ಸಮಾಜದ ಉಪಾಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ, ಕಾರ್ಯದರ್ಶಿ ಚಂಗಚಂಡ ಕಟ್ಟಿಕಾವೇರಪ್ಪ, ಖಜಾಂಚಿ ಪಾನಿಕುಟ್ಟಿರ ಕುಟ್ಟಪ್ಪ, ಪ್ರಮುಖರಾದ ಪದಿಕಂಡ ನಾಗೇಶ್, ಕೊಂಗೆಪಂಡ ಕುಟ್ಟಪ್ಪ, ತೋರೆರ ಉಮೇಶ್ ಮತ್ತು ಹೆಗ್ಗಡೆ ಸಮಾಜದ ಆಡಳಿತ ಮಂಡಳಿ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕ್ರಿಕೆಟ್ ಸಿನಿಯರ್ ವಿಭಾಗದಲ್ಲಿ 19 ತಂಡಗಳು, ಕ್ರಿಕೆಟ್ ಜೂನಿಯರ್ ವಿಭಾಗದಲ್ಲಿ 5 ತಂಡಗಳು, ಥ್ರೋ ಬಾಲ್ 7 ತಂಡಗಳು ನೊಂದಾವಣೆ ಮಾಡಿಕೊಂಡಿದ್ದು, ಹೆಗ್ಗಡೆ ಜನಾಂಗದವರು ವಾಸವಿರುವ ಪ್ರದೇಶಗಳನ್ನು 9 ವಲಯಗಳನ್ನಾಗಿ ವಿಂಗಡಿಸಿದ್ದು, ಪಂದ್ಯಾವಳಿಯು ವಿವಿಧ ವಲಯಗಳ, ತಂಡಗಳ ಮಧ್ಯೆ ನಡೆಯಲಿವೆ ಎಂದು ಮಾಹಿತಿ ನೀಡಿದರು.
ಮೇ 1 ರಂದು ಅಪರಾಹ್ನ 1.30ಕ್ಕೆ ಸಮಾರೋಪ ಸಮಾರಂಭ ಮತ್ತು ಫೈನಲ್ ಪಂದ್ಯಾವಳಿ ನಡೆಯಲಿದೆ ಎಂದು ಅಯ್ಯಪ್ಪ ತಿಳಿಸಿದರು.









