ವಿರಾಜಪೇಟೆ ಏ.27 : ಜೆಡಿಎಸ್ ಪಕ್ಷದ ವಿರಾಜಪೇಟೆ ನಗರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಯೋಗೇಶ್ ನಾಯ್ಡು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ತೊರೆದು ತಾಲೂಕು ಅಧ್ಯಕ್ಷ ಪಿ.ಎ.ಮಂಜುನಾಥ್ ಅವರಿಗೆ ರಾಜಿನಾಮೆ ಸಲ್ಲಿಸಿದ್ದಾರೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ನಾಮಪತ್ರ ಸಿಲ್ಲಿಸಲಾಗಿದ್ದರು ಇದುವರೆಗು ಚುನಾವಣೆ ಬಗ್ಗೆ ಯಾವುದೇ ಕಾರ್ಯ ಚಟುವಟಿಕೆಗಳು ನಡೆಯದಿರುವ ಕಾರಣ ನಾನು ಜೆಡಿಎಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಮುಂದೆ ರಾಷ್ಟ್ರೀಯ ಪಕ್ಷದತ್ತ ನನ್ನ ನಡೆ ಎಂದ ಯೋಗೇಶ್ ನಾಯ್ಡು ರಾಜೀನಾಮೆ ಪತ್ರವನ್ನು ತಾಲೂಕು ಅಧ್ಯಕ್ಷ ಪಿ.ಎ.ಮಂಜುನಾಥ್ ಅವರಿಗೆ ಸಲ್ಲಿಸಿರುವುದಾಗಿ ತಿಳಿಸಿದರು.









