ಸೋಮವಾರಪೇಟೆ ಏ.27 : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನುದಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಓ.ಡಿ.ಪಿ ಮಹಿಳಾ ಸಾಂತ್ವನ ಕೌಟಂಬಿಕ ಸಲಹಾ ಕೇಂದ್ರವು ಕಳೆದ 5 ವರ್ಷಗಳಲ್ಲಿ 542 ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕರಾದ ಅಲೆಕ್ಸಾ ಪ್ರಶಾಂತ್ ಸಿಕ್ವೇರಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಕೌಟಂಬಿಕಾ ದೌರ್ಜನ್ಯ, ಗಂಡನಿoದ ಹಿಂಸೆ, ಅತ್ಯಾಚಾರ, ವರದಕ್ಷಿಣೆ ಕಿರುಕುಳ ಹಾಗು ಇನ್ನಿತರ ಮಾನಸಿಕ ಹಿಂಸೆಗಳಿಗೆ ಸಂಬoಧಪಟ್ಟoತೆ 553 ಪ್ರಕರಣಗಳು ದಾಖಲಾಗಿದ್ದು 542 ಇತ್ಯರ್ಥವಾಗಿ 11 ಪ್ರಕರಣಗಳು ಇತ್ಯಾರ್ಥದ ಹಂತದಲ್ಲಿವೆ ಎಂದು ಹೇಳಿದರು.
ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿರುವ ನೊಂದ ಮಹಿಳೆಯರಿಗೆ ಕಾನೂನು ನೆರವು ಹಾಗೂ ಆಪ್ತಸಮಾಲೋಚನೆಯ ಸೇವೆಯನ್ನು ಪ್ರತಿದಿನ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮಹಿಳಾ ದೌರ್ಜನ್ಯಕ್ಕೆ ಒಳಗಾದ ನೊಂದ ಮಹಿಳೆಯರು ಸಹಾಯವಾಣಿ ಸಹಕಾರ ಪಡೆದುಕೊಳ್ಳಲು ಓ.ಡಿ.ಪಿ, ಮಹಿಳಾ ಸಾಂತ್ವಾನ ಕೇಂದ್ರ, ಮನೆ ಸಂಖ್ಯೆ 57/ಅ ಸರ್ಕಾರಿ ಆಸ್ಪತ್ರೆ ಹತ್ತಿರ, ಸೋಮವಾರಪೇಟೆ. ಕೊಡಗು, ದೂ. ಸಂಖ್ಯೆ 08276 282195 ಗೆ ಕರೆ ಮಾಡಬಹುದಾಗಿದೆ.










