ಸೋಮವಾರಪೇಟೆ ಏ.27 : ಕಾರ್ಮಿಕ ಭವಿಷ್ಯನಿಧಿ ಸಂಘಟನೆ ವತಿಯಿಂದ ಕಾರ್ಮಿಕರ ಭವಿಷ್ಯ ನಿಧಿ ಜಾಗೃತಿ ಕಾರ್ಯಾಗಾರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಉದ್ಯೋಗದಾತರು, ಉದ್ಯೋಗಿಗಳು, ಪಿಂಚಣಿದಾರರ ಕುಂದುಕೊರತೆಗಳನ್ನು ಅಧಿಕಾರಿಗಳು ಆಲಿಸಿ, ಸೂಕ್ತ ವಿವರಗಳನ್ನು ನೀಡಿದರು.
ಸೋಮವಾರಪೇಟೆ ಪತ್ರಿಕಾ ಭವನದ ಅಧ್ಯಕ್ಷ ಎಸ್.ಮಹೇಶ್ ಮಾತನಾಡಿ, ಕೆಲ ಸರ್ಕಾರಿ ಸಂಸ್ಥೆಗಳಿಗೆ ಖಾಸಗಿ ಕಂಪನಿಗಳು ನೌಕರರನ್ನು ಒದಗಿಸುತ್ತವೆ. ಕಂಪೆನಿಗಳು ಸೂಕ್ತ ವೇತನ, ಭವಿಷ್ಯನಿಧಿ ನೀಡದೆ ವಂಚಿಸಲಾಗುತ್ತಿದೆ. ಈ ಕಾರಣದಿಂದ ಉದ್ಯೋಗಿಗಳು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಇಂತಹ ಶೋಷಣೆಯನ್ನು ನಿಲ್ಲಿಸುವ ಜವಾಬ್ದಾರಿ ಸಂಘಟನೆಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರವರ್ತನ ಅಧಿಕಾರಿ ಬಿ.ಎನ್.ರಮೇಶ್, ಅಧಿಕಾರಿಗಳಾದ ಸಂಪತ್ ಕುಮಾರ್, ಪಿ.ಎಂ.ಸುಲೋಚನಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ಅರೋಗ್ಯ ನಿರೀಕ್ಷಕರಾದ ಜಾಸಿಂ ಖಾನ್ ಇದ್ದರು.










