ನಾಪೋಕ್ಲು ಏ.28 : ವಿರಾಜಪೇಟೆ ಸಮೀಪದ ವಿ ಬಾಡಗ ಗ್ರಾಮದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ರಕ್ಷಿಸಲಾಗಿದೆ.
ವಿ ಬಾಡಗದ ಕಂಜಿತಂಡ ಚಿನ್ನಪ್ಪ ಎಂಬವರ ಮನೆ ಹತ್ತಿರ ಇದ್ದ 12 ಅಡಿ ಉದ್ದದ ಬಾರಿ ಗಾತ್ರದ ಕಾಳಿಂಗ ಸರ್ಪವನ್ನು ಉರಗತಜ್ಞ ಪೊನ್ನೀರ ಗಗನ್ ರಕ್ಷಿಸಿ ಪೆರಂಬಾಡಿ ರಕ್ಷಿತಾರಣ್ಯಕ್ಕೆ ಬಿಟ್ಟರು.
ಗಗನ್ ವಿವಿಧ ಜಾತಿಯ ಹಾವುಗಳನ್ನು ಹಿಡಿದು ರಕ್ಷಿಸಿದ್ದು, ಇದು 66ನೇ ಕಾಳಿಂಗ ಸರ್ಪವಾಗಿದೆ. ಯಾವುದೇ ತರದ ಹಾವುಗಳು ಕಂಡರೆ ಸಂಪರ್ಕಿಸುವಂತೆ ತಿಳಿಸಿದರು.
ವರದಿ : ದುಗ್ಗಳ ಸದಾನಂದ