ಮಡಿಕೇರಿ ಏ.28 : ಕೊಡಗು ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಜೂ.4 ರಂದು ಪೊನ್ನಂಪೇಟೆಯಲ್ಲಿ ಹಿರಿಯ ಅಥ್ಲಿಟ್‍ಗಳಿಗೆ ನಾಲ್ಕು ವಿಭಾಗಗಳಲ್ಲಿ ಮೆರಾಥಾನ್ ಸ್ಪರ್ಧೆಯನ್ನು ಆಯೋಜಿಸಲಾಗಿದೆಯೆಂದು ಅಸೋಸಿಯೇಷನ್ ಅಧ್ಯಕ್ಷ ಬಲ್ಯಮೀದೇರಿರ ಪ್ರಕಾಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಿಂದ ಹಳ್ಳಿಗಟ್ಟು ಮಾರ್ಗವಾಗಿ ಮತ್ತೆ ಶಾಲಾ ಮೈದಾನ ಸೇರುವಂತೆ 5 ಕಿ.ಮೀ. ದೂರದ ಮೆರಥಾನ್ ಸ್ಪರ್ಧೆ ಅಂದು ಬೆಳಗ್ಗೆ 6.30 ಗಂಟೆಗೆ ನಡೆಯಲಿದೆಯೆಂದು ತಿಳಿಸಿದರು.
ಮೆರಥಾನ್‍ನಲ್ಲಿ 35 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳಾ ಅಥ್ಲಿಟ್‍ಗಳು ಪಾಲ್ಗೊಳ್ಳಬಹುದಾಗಿದೆ.ಮೆರಥಾನ್ ಸ್ಪರ್ಧೆ 35 ವರ್ಷದಿಂದ 44 ವರ್ಷದ ಒಳಗಿನ ವಿಭಾಗ, 45 ರಿಂದ 54 ವರ್ಷದ ಒಳಗಿನವರು, 55 ರಿಂದ 64 ವರ್ಷ ಹಾಗೂ 64 ವರ್ಷ ಮೇಲ್ಪಟ್ಟವರ ವಿಭಾಗಗಲ್ಲಿ ನಡೆಯಲಿದೆ. ಜಿಲ್ಲೆಯಲ್ಲಿರುವ ಪ್ರತಿಭಾವಂತ ಹಿರಿಯ ಕ್ರೀಡಾ ಪಟುಗಳನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ಮೆರಥಾನ್ ಆಯೋಜಿಸಲಾಗಿದೆಯೆಂದು ಹೇಳಿದರು.
ಮೆರಥಾನ್‍ನಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು 100 ರೂ. ಪ್ರವೇಶ ಶುಲ್ಕದೊಂದಿಗೆ ಮೇ30ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ತಮ್ಮ ವಯಸ್ಸಿನ ದೃಢೀಕರಣಕ್ಕೆ ಆಧಾರ್ ಸಲ್ಲಿಸುವುದು ಕಡ್ಡಾಯವೆಂದು ತಿಳಿಸಿ, ಹೆಚ್ಚಿನ ಮಾಹಿತಿಗಾಗಿ ಬಲ್ಯಮೀದೇರಿರ ಪ್ರಕಾಶ್ ಮೊ.8861022076, ಮೂಕಳೇರ ಮೀರಾ ಅಶೋಕ್ ಮೊ.9739196123, 8453643808ನ್ನು ಸಂಪರ್ಕಿಸಬಹುದೆಂದು ಸ್ಪಷಪಡಿಸಿದರು.
ಪಾಲಿಬೆಟ್ಟದ ದೈಹಿಕ ಶಿಕ್ಷಣ ಶಿಕ್ಷಕಿ ಮೂಕಳೇರ ಮೀರಾ ಅಶೋಕ್ ಮಾತನಾಡಿ, ಜಿಲ್ಲೆಯಲ್ಲಿರುವ 9 ಮಂದಿ ಹಿರಿಯ ಕ್ರೀಡಾಪಟುಗಳು ಮಲೇಷಿಯಾ, ಆಸ್ಟ್ರೇಲಿಯಾ ಸೇರಿದಂತೆ ವಿವಿಧೆಡೆಗಳಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಮಾಸ್ಟರ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಉನ್ನತ ಸಾಧನೆ ಮಾಡಿದ್ದಾರೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಕಾರ್ಯದರ್ಶಿ ಮುಲ್ಲೇರ ಪೊನ್ನಮ್ಮ, ಅಂತರಾಷ್ಟ್ರೀಯ ಕ್ರೀಡಾಪಟು ಹೊಸೊಕ್ಲು ಚಿಣ್ಣಪ್ಪ, ಸದಸ್ಯರಾದ ಕಂಬೀರಂಡ ಕಿಟ್ಟು ಕಾಳಪ್ಪ ಉಪಸ್ಥಿತರಿದ್ದರು.