ಮಡಿಕೇರಿ ಏ.29 : ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ 5, 7, 10 ಹಾಗೂ +2 ತರಗತಿಗಳಿಗೆ ನಡೆಸುವ ಸಮಸ್ತ ಪಬ್ಲಿಕ್ ಪರೀಕ್ಷೆಯಲ್ಲಿ ದಾರುಲ್ ಉಲೂಂ ಮದ್ರಸ ಕುಶಾಲನಗರ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಹೊಂದಿದ್ದಾರೆ ಎಂದು ಪ್ರಾಂಶುಪಾಲರಾದ ತಮ್ಲೀಖ್ ದಾರಿಮಿ ತಿಳಿಸಿದ್ದಾರೆ.
ಉಸ್ತಾದ್ ಸ್ವಾಲಿಹ್ ಅಝ್ಹರಿಯವರ 5ನೇ ತರಗತಿಯಲ್ಲಿ 5 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು ಮಡಿಕೇರಿ ರೇಂಜ್ ಮಟ್ಟದಲ್ಲಿ ಮೊದಲ ಮೂರು ಸ್ಥಾನಗಳನ್ನು ಶೈಖ್ ಅಮಾನ್, ಮುಹಮ್ಮದ್ ಆಮೀರ್,ಆಯಿಷಾ ಫಾಝಿಲಾ ಕ್ರಮವಾಗಿ ಪಡೆದುಕೊಂಡಿದ್ದಾರೆ. ಪ್ರತ್ಯೇಕವಾಗಿ ಶೈಖ್ ಅಮಾನ್ ಜಿಲ್ಲಾ ಮಟ್ಟದಲ್ಲಿ 2ನೇ ಸ್ಥಾನ ಹಾಗೂ ಮುಹಮ್ಮದ್ ಆಮೀರ್ 3ನೇ ಸ್ಥಾನ ಪಡೆದಿದ್ದಾರೆ.
ಮುಷ್ತಾಕ್ ದಾರಿಮಿ ಕಲಿಸುತ್ತಿರುವ 7ನೇ ತರಗತಿಯಲ್ಲಿ 2 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು ರೇಂಜ್ ಮಟ್ಟದಲ್ಲಿ 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
10ನೇ ತರಗತಿಯಲ್ಲಿ ಕಲಿಯುತ್ತಿರುವ ಸಫ್ವಾನ್ ಜೆ ಐ ಎಂಬ ವಿದ್ಯಾರ್ಥಿಯೂ ಡಿಸ್ಟಿಂಕ್ಷನೊಂದಿಗೆ ಕೊಡಗು ಜಿಲ್ಲೆಯಲ್ಲಿ ಮೊದಲ ರ್‍ಯಾಂಕ್ ಪಡೆದಿದ್ದಾರೆ. ಫಾತಿಮಾ ನಾಸರ್ 3ನೇ ಸ್ಥಾನ ಪಡೆದಿದ್ದು ರೇಂಜ್ ಮಟ್ಟದಲ್ಲಿಯೂ ಉನ್ನತ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರಿಗೆ ಉನೈಸ್ ಫೈಝಿಯವರು ತರಬೇತಿ ನೀಡಿದ್ದರು.
ಸೂಫಿ ದಾರಿಮಿಯವರ +2 ತರಗತಿಯಲ್ಲಿ ನಿಶಾನಾ ಹಾಗೂ ಆಯಿಷತು ಸಾನಿಯಾ ಎಂಬ ವಿದ್ಯಾರ್ಥಿನಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವುದರೊಂದಿಗೆ ಮೊದಲೆರೆಡು ಸ್ಥಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ.