ಮಡಿಕೇರಿ ಮೇ 7 : ವಿರಾಜಪೇಟೆ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಿ.ಎಸ್.ರವೀಂದ್ರ ಪರವಾಗಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಮತಯಾಚಿಸಿದರು. ಇಂದು ಐಮಂಗಲ, ಬಿಳುಗುಂದ, ಕಾವಾಡಿ, ಅಂಬಟ್ಟಿ, ಬಿಟ್ಟಂಗಾಲ, ಮಗ್ಗುಲ,ಚಂಬೆಬೆಳ್ಳೂರು ಕಡೆಗಳಲ್ಲಿ ಚುನಾವಣೆ ಪ್ರಚಾರ ನಡೆಸಿದರು. ಪಕ್ಷದ ಜಿಲ್ಲಾಧ್ಯಕ್ಷ ಬೋಜಣ್ಣ ಸೋಮಯ್ಯ ಮತ್ತಿತರರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.










