ಚೆಯ್ಯಂಡಾಣೆ ಮೇ 9 : ಚಾಮಿಯಾಲ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ 4ನೇ ವರ್ಷದ ಚಾಮಿಯಾಲ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯು 2 ದಿನಗಳ ಕಾಲ ಕುವೆಲೆರ ಅನಿಸ್ ಕುಟುಂಬದ ಗದ್ದೆಯಲ್ಲಿ ನಡೆಯಿತು.
ಫೈನಲ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಎ.ಎಸ್. ಬ್ಲಾಸ್ಟರ್ಸ್ ತಂಡ ಹೊರಹೂಮ್ಮಿದರೆ, ರನ್ನರ್ಸ್ ಸ್ಥಾನಕ್ಕೆ ಅಯಾನ್ ಸೂಪರ್ ಸ್ಟಾರ್ ತಂಡ ತೃಪ್ತಿ ಪಟ್ಟಿತ್ತು.
ಮೂರನೇ ಸ್ಥಾನವನ್ನು ಶಾಮಿಲಿ ಕಿಂಗ್ಸ್ ತಂಡ ಪಡೆದು ಕೊಂಡಿತ್ತು.
ಮೊದಲು ನಡೆದ ಸೆಮಿಫೈನಲ್ ಪಂಧ್ಯದಲ್ಲಿ ಅಯಾನ್ ಸೂಪರ್ ಸ್ಟಾರ್ ತಂಡ ಎ.ಎಸ್.ಬ್ಲಾಸ್ಟರ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು.
ಮತ್ತೊಂದು ಸೆಮಿಫೈನಲ್ ಪಂದ್ಯಾವಳಿಯನ್ನು ಎ.ಎಸ್.ಬ್ಲಾಸ್ಟರ್ಸ್ ತಂಡ ಶಾಮಿಲಿ ಕಿಂಗ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು.
ಫೈನಲ್ ಪಂದ್ಯಾವಳಿಯಲ್ಲಿ ಸ್ಥಳೀಯ ಜಮಾಅತ್ ಅಧ್ಯಕ್ಷ ಕೆ.ಎ.ಮಜೀದ್ ಬೋಲಿಂಗ್ ಹಾಗೂ ಗ್ರಾಮದ ಹಿರಿಯರಾದ ರಶೀದ್ ಬ್ಯಾಟಿಂಗ್ ಮಾಡುವುದರ ಮೂಲಕ ಉದ್ಘಾಟಿಸಿದರು.
ಒಟ್ಟು 5 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದವು. ಅಯಾನ್ ಸೂಪರ್ ಸ್ಟಾರ್ , ಎ.ಎಸ್ ಬ್ಲಾಸ್ಟರ್ಸ್, ಶಾಮಿಲಿ ಕಿಂಗ್ಸ್, ಲಯನ್ಸ್ ಕುವೆಲೇರ, ಡಾಟ್ ವೀಲ್ ತಂಡಗಳು ಭಾಗವಹಿಸಿದವು.
ಬಹುಮಾನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿದ ಮುಖ್ಯ ಅತಿಥಿ ಪಾಲೇಕಂಡ ಕುಮಾರ್ ಮಾತನಾಡಿ, ಕ್ರೀಡಾಕೂಟದಲ್ಲಿ ಸೋಲು ಗೆಲುವು ಮುಖ್ಯವಲ್ಲ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಮುಖ್ಯ. ಚಾಮಿಯಾಲ ಗ್ರಾಮದಲ್ಲಿ ಉತ್ತಮ ಕ್ರೀಡಾಕೂಟ ಆಯೋಜಿಸಿದ್ದೀರಾ ಎಲ್ಲ ವರ್ಷವು ಇದೇ ರೀತಿ ಕ್ರೀಡಾಕೂಟ ಉತ್ತಮವಾಗಿ ನಡೆಯಲಿ ಎಂದು ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಚಾಂಪಿಯನ್ ಎ.ಎಸ್.ಬ್ಲಾಸ್ಟರ್ಸ್ ತಂಡಕ್ಕೆ 55,555 ನಗದು ಹಾಗೂ ಆಕರ್ಷಕ ಟ್ರೋಫಿ, ರನ್ನರ್ಸ್ ಅಯಾನ್ ಸೂಪರ್ ಸ್ಟಾರ್ ತಂಡಕ್ಕೆ 33,333 ನಗದು ಹಾಗೂ ಆಕರ್ಷಕ ಟ್ರೋಫಿ ಯನ್ನು ವಿತರಿಸಲಾಯಿತು.
ಪಂದ್ಯ ಪುರುಷ ಪ್ರಶಸ್ತಿಯನ್ನು ಶಾಹೀರ್ ಪಡೆದುಕೊಂಡರೆ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮುನೀರ್ ಪಡೆದುಕೊಂಡರು, ಅತ್ಯುತ್ತಮ ಆಟವಾಡಿದ ಆಟಗಾರರಿಗೆ ವ್ಯಯಕ್ತಿಕ ಬಹುಮಾನ ಕೂಡ ನೀಡಲಾಗಿತ್ತು.
ತೀರ್ಪುಗಾರರಾಗಿ ವಿರಾಜಪೇಟೆಯ ಅಜಿತ್ ಹಾಗೂ ಅರ್ಷಾದ್, ಸ್ಕೋರರ್ ಆಗಿ ಸ್ವಾದಿಕ್, ವೀಕ್ಷಕ ವಿವರಣೆಯನ್ನು ರಾಹುಲ್ ನಿರ್ವಹಿಸಿದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಸನಾ ಟೆಕ್ಸ್ ಟೈಲ್ಸ್ ಮಾಲೀಕ ಇಸ್ಮಾಯಿಲ್, ಹ್ಯಾಪಿ ಶೋಪ್ ಮಾಲೀಕ ಶಾದುಲಿ, ಗ್ರಾ.ಪಂ ಸದಸ್ಯೆ ಬೋಜಮ್ಮ, ಶಂಸು, ಮಜೀದ್, ಮಹ್ಮೂದ್, ಮಾಮು, ಸಿಪಿಎಲ್ ನಾ ಪದಾಧಿಕಾರಿಗಳಾದ ಅಝೀಝ್, ಅಸ್ಪಾಕ್, ನಿಜಮುದ್ದಿನ್, ಅನೀಸ್, ಮುನೀರ್,ಎಬಿಡಿ ಲತೀಫ್ ಮತಿತ್ತರರು ಹಾಜರಿದ್ದರು.
ವರದಿ : ಅಶ್ರಫ್