ಸುಂಟಿಕೊಪ್ಪ ಮೇ 10 : ಸುಂಟಿಕೊಪ್ಪ ಸಂತ ಅಂತೋಣಿ ಶಾಲೆಯ 139 ಮತಗಟ್ಟೆಯಲ್ಲಿ ವಿದ್ಯಾರ್ಥಿನಿ ಶಿವಾನಿ ಪ್ರಥಮ ಮತ ಚಲಾಯಿಸಿ ಸಂಭ್ರಮಿಸಿದರು.
ನಂತರ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಮತದಾನ ಹಕ್ಕು ಶ್ರೇಷ್ಠವಾಗಿದ್ದು, ದೇಶವನ್ನು ಆಳುವವರ ಆಯ್ಕೆ ಮಾಡುವ ಹಕ್ಕು ಲಭಿಸಿರುವುದೇ ಅತೀವ ಸಂತಸ ತಂದಿದೆ ಎಂದು ಶಿವಾನಿ ಅಭಿಪ್ರಾಯ ವ್ಯಕ್ತಪಡಿಸಿದರು.








