ಮಡಿಕೇರಿ ಮೇ 10 : ‘ಕೊಡಗಿನ ಕಾಫಿ’ ಈ ಬಾರಿಯ ಚುನಾವಣೆಯಲ್ಲಿ ಮತದಾರರನ್ನು ಮತಗಟ್ಟೆಯತ್ತ ಸೆಳೆೆಯುವ ಅಂಶವಾಗಿರುವ ವಿಶೇಷ ಈ ಬಾರಿಯ ಚುನಾವಣೆಯದ್ದು. ಜಿಲ್ಲೆಯ ಮೂರು ಮತಗಟ್ಟೆಗಳು ಕಾಫಿಯ ಚಿತ್ರಣಗಳನ್ನು ಒಳಗೊಂಡು ಅತ್ಯಾಕರ್ಷಕವಾಗಿ ಗಮನ ಸೆಳೆದದ್ದು ವಿಶೇಷ.
ನಗರದ ಹಿಲ್ ರಸ್ತೆಯ ಸಿಎಂಸಿ ಮಾದರಿ ಪ್ರಾಥಮಿ ಶಾಲೆಯ 210 ನೇ ಮತಗಟ್ಟೆ ಕಾಫಿ ಹಣ್ಣುಗಳ ಗಿಡ, ಕಾಫಿ ಕೊಯ್ಯುವ ಮಹಿಳೆಯ ಚಿತ್ರಣಗಳೊಂದಿಗೆ ಅತ್ಯಾಕರ್ಷಕವಾಗಿ ಅಲಂಕೃತಗೊoಡಿತ್ತಲ್ಲದೆ, ಬಿಸಿ ಬಿಸಿ ಕಾಫಿ ಸವಿಯಲು ಇಲ್ಲಿ ಅವಕಾಶ ಕಲ್ಪಿಸಿದ್ದು ವಿನೂತನವಾಗಿತ್ತು.
ಇದೇ ಮತಗಟ್ಟೆಯಲ್ಲಿ ವಿಶೇಷ ಚೇತನರಿಗಾಗಿ ರ‍್ಯಾಂಪ್, ರೈಲಿಂಗ್ಸ್, ವೀಲ್‌ಚೇರ್ ಹಾಗೂ ವಾಹನ ಸೌಲಭ್ಯ ಕಲ್ಪಿಸುವ ಮೂಲಕ ಮಾದರಿ ಮತಗಟ್ಟೆಯನ್ನಾಗಿಯೂ ರೂಪಿಸಲಾಗಿತ್ತು.
ನಿರೀಕ್ಷಣಾ ಕೊಠಡಿ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳು ಕಲ್ಪಿಸಿದ್ದು ಮಾತ್ರವಲ್ಲದೆ, ವಿಶೇಷಚೇತನರು ಹಾಗೂ ಹಿರಿಯ ನಾಗರಿಕ ಮತದಾರರ ಸಹಾಯಕ್ಕಾಗಿ ಸ್ವಯಂ ಸೇವಕರ ಸೇವೆಯನ್ನು ಒದಗಿಸಲಾಗಿತ್ತು.
ಈ ರೀತಿಯ ಮತಗಟ್ಟೆಗಳನ್ನು ರಂಗ ಸಮುದ್ರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಪೊನ್ನಂಪೇಟೆ ಜಿಎಂಪಿಎಸ್ ಶಾಲೆಯಲ್ಲೂ ಸಜ್ಜುಗೊಳಿಸಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುವ ಮೂಲಕ ಸ್ವೀಪ್ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
Breaking News
- *ಮೂರ್ನಾಡು ಫ್ರೆಂಡ್ಸ್ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವಾರ್ಷಿಕ ಮಹಾಸಭೆ : ನೂತನ ಪದಾಧಿಕಾರಿಗಳ ಆಯ್ಕೆ*
- *ನಿಧನ ಸುದ್ದಿ*
- *ರಾಜ್ಯ ಸರ್ಕಾರದ ವಿರುದ್ಧ ಮಡಿಕೇರಿಯಲ್ಲಿ ಬಿಜೆಪಿ ಪ್ರತಿಭಟನೆ : “ವಕ್ಫ್ ಕಾಯ್ದೆ” ಹಿಂಪಡೆಯಲು ಒತ್ತಾಯ : ಪ್ರತಾಪ್ ಸಿಂಹ ವಾಗ್ಧಾಳಿ*
- *ಶಾಲಾ ಮಕ್ಕಳ ಮನವಿಗೆ ಸ್ಪಂದಿಸಿದ ಶಾಸಕ ಡಾ.ಮಂತರ್ ಗೌಡ*
- *ಕನ್ನಡ ರಾಜ್ಯೋತ್ಸವ : ನ.23 ರಂದು ಮಡಿಕೇರಿಯಲ್ಲಿ ರಸಪ್ರಶ್ನೆ ಮತ್ತು ಗೀತಗಾಯನ ಕಾರ್ಯಕ್ರಮ*
- *ಗಂಗಮ್ಮ ನಿಧನ : ಶಾಸಕ ಪೊನ್ನಣ್ಣ ಸಂತಾಪ*
- *ಕೊಡಗು : ಡಿ.1 ರಿಂದ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಪ್ರಕ್ರಿಯೆ ಆರಂಭ : ಜಿಲ್ಲಾಧಿಕಾರಿ ವೆಂಕಟ್ ರಾಜಾ*
- *ಪಡಿತರ ಚೀಟಿ ಪರಿಷ್ಕರಣೆ : ಅರ್ಹ ಬಿಪಿಎಲ್ ಕಾರ್ಡ್ ರದ್ದುಗೊಳಿಸುವುದಿಲ್ಲ : ಸಚಿವ ಮುನಿಯಪ್ಪ*
- *ಕೊಡಗು ಬ್ಲಡ್ ಡೋನಸ್೯ ಸಂಸ್ಥೆಯ 7ನೇ ವಾಷಿ೯ಕೋತ್ಸವ : ಜೀವ ಉಳಿಸುವ ರಕ್ತದಾನಿಗಳೇ ನಿಜವಾದ ಹೀರೋಗಳು : ಅನಿಲ್ ಹೆಚ್.ಟಿ.*
- *ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಚುನಾವಣೆ : ಜಾನ್ಸನ್ ಪಿಂಟೋ ಸೇರಿ ಹಲವರು ಕಣದಲ್ಲಿ*