ಮಡಿಕೇರಿ ಮೇ 12 : ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಕೊಡಗು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಮೇ 10 ರ ಮತದಾನದ ದಿನದಂದು ‘ಸೆಲ್ಫಿ ಕಂಟೆಸ್ಟ್’ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಜಿಲ್ಲೆಯ 2 ವಿಧಾನಸಭಾ ಕ್ಷೇತ್ರದಿಂದ ಸುಮಾರು 620 ಸ್ಪರ್ಧಿಗಳು ಭಾಗವಹಿಸಿದ್ದರು.
ಸ್ಪರ್ಧಿಗಳು ಕಳುಹಿಸಿದ ಸೆಲ್ಫಿಗಳಲ್ಲಿ ಅತ್ಯುತ್ತಮವಾದ ಸೆಲ್ಫಿಗಳನ್ನು ಗುರುತಿಸಿ ವಿಜೇತರನ್ನು ಆಯ್ಕೆ ಮಾಡಲಾಗಿದೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚೆನ್ನಯ್ಯನ ಕೋಟೆಯ ಮತಗಟ್ಟೆ ಸಂಖ್ಯೆ 115 ಕಾರ್ಯಪ್ಪ(ಪ್ರಥಮ), ಮಾಯಮುಡಿಯ ಮತಗಟ್ಟೆ ಸಂಖ್ಯೆ 208 ಬಾನಂಡ ಆಶಾ ಸೂದನ(ದ್ವಿತೀಯ), ಕೊಟ್ಟೋಳಿ ಮತಗಟ್ಟೆ ಸಂಖ್ಯೆ 168 ರ ಗಿರೀಶ್ ಕುಮಾರ್(ತೃತೀಯ) ಬಹುಮಾನ ಪಡೆದಿದ್ದಾರೆ.
ಸಮಾಧಾನಕರ ಬಹುಮಾನವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 51 ದೊಡ್ಡಮಳ್ತೆಯ ಜಯಶ್ರೀ, ಮದಲಾಪುರ ಮತಗಟ್ಟೆ ಸಂಖ್ಯೆ 147 ರ ಶ್ವೇತಾ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ನರಿಯಂದಡ ಎಡಪಾಲ ಮತಗಟ್ಟೆ ಸಂಖ್ಯೆ 83 ಸುಮಯ್ಯ ಇವರು ಭಾಜನರಾಗಿದ್ದು, ವಿಜೇತರಿಗೆ ಕೊಡಗು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಬಹುಮಾನ ವಿತರಿಸಲಾಗುವುದು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ತಿಳಿಸಿದ್ದಾರೆ.









