ಮಡಿಕೇರಿ ಮೇ 15 : ಅಲ್ಲಾರಂಡ ರಂಗಚಾವಡಿ ವತಿಯಿಂದ ಮೇ 17 ರಂದು ಪರದಂಡ ಚಂಗಪ್ಪ ಅವರ 105ನೇ ಸಂಸ್ಮರಣಾ ದಿನವನ್ನು ಆಚರಿಸಲಾಗುವುದೆಂದು ರಂಗಚಾವಡಿ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಬೆಂಗಳೂರಿನ ಓಶಿಯಾನಿಕ್ ಕಾಲೇಜ್ ಆಫ್ ಹೈಯರ್ ಎಜುಕೇಶನ್‍ನ ಚೇರ್‍ಮೆನ್ ಡಾ.ತೇಜ್ ಪೂವಯ್ಯ ನಡಿಕೇರಿಯಂಡ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸುಳ್ಯ ಕೆವಿಜಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಮೋಹನ್ ಅಪ್ಪಾಜಿ ಕೋಲೆಯಂಡ ವಹಿಸಲಿದ್ದಾರೆ.
ಅತಿಥಿಗಳಾಗಿ ಬೆಂಗಳೂರಿನ ಸಂತ ಜೋಸೆಫರ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರು ಡಾ.ಪರದಂಡ ಸುನಿಲ್ ಸೋಮಯ್ಯ, ಮೈಸೂರು ವಿಶ್ವವಿದ್ಯಾಲಯ ಚರಿತ್ರೆ ವಿಭಾಗದ ಡಾ.ರಾಧಿಕ ಕುಟ್ಟಪ್ಪ ಬೋಡ್‍ಕುಟ್ಟಡ, ಪರದಂಡ ಕುಟುಂಬಸ್ಥರಾದ ಪರದಂಡ ಅಪ್ಪಸ್ವಾಮಿ ಪಾಲ್ಗೊಳ್ಳಲಿದ್ದು, ಜಾನಪದ ಕಲಾವಿದ ಕುಡಿಯರ ಮುತ್ತಪ್ಪ ಮುತ್ತ್‍ನಾಡ್‍ಮಲೆ “ನಾಕಂಡಂತೆ ಪರದಂಡ ಚಂಗಪ್ಪ” ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಜನಪದ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಕಬ್ಬೆಮಲೆ ಶಾರದ ಸೋಮಯ್ಯ ಹಾಗೂ ಕೊಡವ ಭಾಷೆಯ ಪ್ರಪ್ರಥಮ ಆದಿ ಅಂತ್ಯಪ್ರಾಸ ಕವಿಯತ್ರಿ ಪಂದ್ಯಂಡ ರೇಣುಕಾ ಸೋಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.









