ನಾಪೋಕ್ಲು ಮೇ 17 : ಬಲ್ಲಮಾವಟಿಯ ಭಜರಂಗಿ ಯೂತ್ ಕ್ಲಬ್ ವತಿಯಿಂದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ದ್ವಿತೀಯ ವರ್ಷದ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶರತ್ ಫ್ರೆಂಡ್ಸ್ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಫೈನಲ್ ಪಂದ್ಯದಲ್ಲಿ ಕೆ.ಎ.12 ವಾರಿಯರ್ಸ್ ಕೊಡಗು ತಂಡದ ವಿರುದ್ಧ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಕೆಎ 12 ತಂಡ ಏಳು ವಿಕೆಟ್ ನಷ್ಟಕ್ಕೆ 26 ರನ್ ಗಳಿಸಿತು. ಇದನ್ನು ಸುಲಭವಾಗಿ ಬೆನ್ನತ್ತಿದ ಶರತ್ ಫ್ರೆಂಡ್ಸ್ ತಂಡ 2.3 ಓವರ್ ನಲ್ಲಿ ಒಂದು ವಿಕೆಟ್ ನಷ್ಟಕ್ಕೆ 29 ರನ್ ಗಳಿಸಿ ಗೆಲುವು ಸಾಧಿಸಿತು.
ವಿಜೇತ ಶರತ್ ಫ್ರೆಂಡ್ಸ್ ತಂಡಕ್ಕೆ ರೂ. 25555 ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು ದ್ವಿತೀಯ ಸ್ಥಾನ ಪಡೆದ ಕೆಎ 12 ಕೊಡಗು ವಾರಿಯರ್ಸ್ ತಂಡಕ್ಕೆ ರೂ.13,333 ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್, ನೇತಾಜಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿಎಸ್ ಸುರೇಶ್,ಟ್ರೋಫಿ ದಾನಿ ಎಂ.ಎಂ.ಅಪ್ಪಣ್ಣ,ಎಡಿಕೇರಿ ಚರಣ್ ಪಾಲ್ಗೊಂಡಿದ್ದರು. ಟೂರ್ನಿಯಲ್ಲಿ 35 ತಂಡಗಳು ಪಾಲ್ಗೊಂಡಿದ್ದವು.
ಗ್ರಾ.ಪಂ ಸದಸ್ಯ ಚೋಕಿರ ಬಾಬಿ ಭೀಮಯ್ಯ, ಬಜರಂಗಿ ಯೂತ್ ಕ್ಲಬ್ ಅಧ್ಯಕ್ಷ ಎಡಿಕೇರಿ ಪ್ರಸನ್ನ, ಸದಸ್ಯರಾದ ಎಡಿಕೇರಿ ರಾಜೇಶ್, ಕೋಟೇರ ನೂತನ್, ಎಡಿಕೇರಿ ಕೀರ್ತನ್, ನೂತನ್, ಮಧು, ಚಂದ್ರಕಾಂತ್ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಟೂರ್ನಿ ಮೂರು ದಿನಗಳ ಕಾಲ ನಡೆಯಿತು. ತೀರ್ಪುಗಾರರಾಗಿ ಮಡಿಕೇರಿಯ ಮದನ್ ಹಾಗೂ ಎಡಿಕೇರಿ ಚರಣ್ ಕಾರ್ಯನಿರ್ವಹಿಸಿದರು.
ವರದಿ : ದುಗ್ಗಳ ಸದಾನಂದ