
ಮಡಿಕೇರಿ NEWS DESK ಫೆ.22 : ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳ ಸಹಿತ 1 ಕೆಜಿ 60 ಗ್ರಾಂ ಗಾಂಜಾವನ್ನು ವಿರಾಜಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿರಾಜಪೇಟೆಯ ಸುಣ್ಣದ ಬೀದಿಯ ಅಸೈನಾರ್ ರಜಾಕ್ (43) ಹಾಗೂ ಬಾಳುಗೋಡು ಬಿಟ್ಟಂಗಾಲ ಗ್ರಾಮದ ಮೋಹನ ಎ.ಜಿ ಅಶೋಕ (42) ಆರೋಪಿಗಳಾಗಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಒಂಟಿಯಂಗಡಿ ರಸ್ತೆಯ ಪ್ರೌಢಶಾಲೆ ಮೈದಾನದ ಬಳಿಯ ಬಸ್ ತಂಗುದಾಣದಲ್ಲಿ ಇವರಿಬ್ಬರು ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ವಿರಾಜಪೇಟೆ ಉಪವಿಭಾಗದ ಮಹೇಶ್ ಕುಮಾರ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಪಿಎಸ್‌ಐಗಳಾದ ಲತಾ ಎನ್.ಜೆ. ವಾಣಿಶ್ರೀ ಬಿ.ಎಸ್, ಪ್ರಮೋದ್, ಎ.ಎಸ್.ಐ ಸೋಮಣ್ಣ ಕೆ.ಬಿ, ಹೆಚ್.ಸಿಗಳಾದ ನವೀನ್ ಕುಮಾರ್ ಎಸ್.ಎಲ್, ಬಸವರಾಜು ಎಂ, ಅಬ್ದುಲ್ ಮಜೀದ್, ಹನೀಫ್ ಕೆ.ಎ, ಬೋಪಣ್ಣ ಎಂ.ಎಸ್, ರಾಧಾ, ಪಿ.ಸಿಗಳಾದ ಮಹೇಶ್ ಎಸ್, ಶಿವಪ್ರಸಾದ್, ರಾಜೇಶ್ ಎಸ್ ಹಾಗೂ ರಾಘವೇಂದ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಆರ್.ಎನ್ ಶ್ಲಾಘಿಸಿದ್ದಾರೆ.








