ಮಡಿಕೇರಿ ಮೇ 26 : ನಾಡಿನ ವಿವಿಧೆಡೆಗಳಲ್ಲಿ ಬೆಳೆಯುವ ಅಪರೂಪದ ಮತ್ತು ಸ್ವಾದಿಷ್ಟವಾದ ಮಾವು ಮತ್ತು ಹಲಸಿನ ಮೇಳಕ್ಕೆ ನಗರದ ಹಾಪ್ ಕಾಮ್ಸ್ ನಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಚಾಲನೆ ನಿಡಿದರು.
ಜಿಲ್ಲಾಡಳಿತ, ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯತ್ ಮತ್ತು ಹಾಪ್ ಕಾಮ್ಸ್ ವತಿಯಿಮದ ಆಯೋಜಿತ ದ್ವಿತೀಯ ವರ್ಷದ ಮೇಳ ಉದ್ಘಾಟಿಸಿದ ಶಾಸಕರು, ಮಧ್ಯವರ್ತಿಗಳನ್ನು ಹೊರಗಿಟ್ಟು ಬೆಳೆೆಗಾರರು ಮತ್ತು ಗ್ರಾಹಕರಿಗೆ ನೇರ ಸಂಪರ್ಕ ಕಲ್ಪಿಸುವ ಮೇಳ ನಿಜಕ್ಕೂ ಅಪರೂಪದ್ದೆಂದು ಮೆಚ್ಚುಗೆ ವ್ಯಕಪಡಿಸಿದರು.
ಬೆಳೆಗಾರ ತಾನು ಬೆಳೆಯುವ ಹಣ್ಣು, ಹಂಪಲನ್ನು ಮಧ್ಯವರ್ತಿಗಳ ಮೂಲಕ ಮಾರಾಟಮಾಡಬೇಕಾದ ಪರಿಸ್ಥಿತಿ ಇದೆ. ಇದನ್ನು ತಪ್ಪಿಸಿ, ಬೆಳೆಗಾರನ ಉತ್ಪನ್ನಕ್ಕೆ ಯೋಗ್ಯ ಮಾರುಕಟ್ಟೆಯೊಂದಿಗೆ ಉತ್ತಮ ಧಾರಣೆ ಒದಗಿಸುವಲ್ಲಿ ಇಂತಹ ಮೇಳ ಸಹಕಾರಿಯಾಗಿದೆ. ಇಂತಹ ಮೇಳಗಳ ಮೂಲಕ ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಸವಿಯುವ ಅವಕಾಶವೂ ಸಾರ್ವಜನಿಕರಿಗೆ ದೊರಕಲಿದೆ. ಜಿಲ್ಲೆಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಇವರುಗಳು ಮೇಳದ ಪ್ರಯೋಜನವನ್ನು ಪಡೆದುಕೊಳ್ಳಬಹುದೆಂದು ಅನಿಸಿಕೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ, ಮಾವು ಮತ್ತು ಹಲಸಿನ ಮೇಳದಲ್ಲಿ ನೈಸರ್ಗಿಕವಾಗಿ ಮತ್ತು ವೈಜ್ಞಾನಿಕವಾಗಿ ಮಾಗಿಸಿದ ಹಣ್ಣುಗಳು ಲಭ್ಯವಿದೆ. ಇದು ಆರೋಗ್ಯಕ್ಕೂ ಪೂರಕವಾಗಿದೆ. ಮೇಳದಲ್ಲಿ ವಿವಿಧೆಡೆಗಳಿಂದ ಆಗಮಿಸಿರುವ ಬೆಳೆಗಾರರ 25 ಮಳಿಗೆಗಳನ್ನು ತೆರೆಯಲಾಗಿದೆಯೆಂದು ಮಾಹಿತಿಯನ್ನಿತ್ತರು.
ಈ ಸಂದರ್ಭ ಎಂಎಲ್‌ಸಿ ಸುಜಾ ಕುಶಾಲಪ್ಪ, ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ, ಹಾಪ್ ಕಾಮ್ಸ್ ಅಧ್ಯಕ್ಷರಾದ ಬಿದ್ದಾಟಂಡ ರಮೇಶ್ ಚಂಗಪ್ಪ, ತೋಟಗಾರಿಕಾ ಇಲಾಖಾ ಉಪ ನಿರ್ದೇಶಕರಾದ ಹೆಚ್.ಆರ್.ನಾಯಕ್ ಸೇರಿದಂತೆ ಹಲ ಪ್ರಮುಖರು ಪಾಲ್ಗೊಂಡಿದ್ದರು.
ಬಾಯಲ್ಲಿ ನೀರೂರಿಸುವ ಮಾವು- ರಾಮನಗರ, ಮಂಡ್ಯ ವಿಭಾಗಗಳಿಂದ ಆಗಮಿಸಿದ ಬೆಳೆಗಾರರು ತವು ಬೆಳೆದ ರಸಪೂರಿ, ಬಾದಾಮಿ, ಬಾಗಿನ ಪಲ್ಲಿ, ಮಲಗೋವ ಸೇರಿದಂತೆ ಸುಮಾರು ಹದಿನೈದು ತಳಿಯ ಮಾವಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದ್ದಾರೆ. ಸಕ್ಕರೆ ಗುತ್ತಿ ಎನ್ನುವ ಸಣ್ಣ ಮಾವು, ಸುಮಾರು ಒಂದು ಕೆ.ಜಿ. ಗೂ ಹೆಚ್ಚಿನ ತೂಕದ ‘ವಾಲಜ’ ಹೆಸರಿನ ಭಾರೀ ಗಾತ್ರದ ಮಾವು ಗ್ರಾಹಕರ ಗಮನ ಸೆಳೆಯುತ್ತಿದೆ. ಮಾವಿನ ಹಣ್ಣಿನ ದರ ಪ್ರತಿ ಕೆ.ಜಿ.ಗೆ 100 ರೂ.ಗಳಿಂದ 120 ರೂ.ಗಳ ಆಸುಪಾಸಿನಲ್ಲಿ ಕೈಗೆಟಕುವ ದರದಲ್ಲಿರುವುದು ವಿಶೇಷ.
ಹಲಸಿನ ಹಣ್ಣಿನ ಸ್ವಾಧ- ಈ ಬಾರಿ ವಿಶೇಷವಾಗಿ ಹಲಸಿನ ಹಣ್ಣನ್ನು ಮೇಳದಲ್ಲಿ ಸೇರ್ಪಡೆ ಮಾಡಲಾಗಿದೆ. ಮಾಗಡಿಯ ಸಿದ್ದರಾಜು ಅವರ ಮಳಿಗೆಯಲ್ಲಿ ಸ್ವಾದಿಷ್ಟ ಹಲಸು ಪ್ರತಿ ಕೆ.ಜಿ.ಗೆ 25 ರೂ.ಗಳಂತೆ ಲಭ್ಯವಿದ್ದು, ಚಂದ್ರ ಬೊಕ್ಕೆ ಸೇರಿದಂತೆ ಒಂದೆರಡು ತಳಿಯ ಹಲಸುಗಳನ್ನು ಮಾರಾಟಕ್ಕಿಡಲಾಗಿದೆ.
ಬಂಟ್ವಾಳದ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿಯ ಮಳಿಗೆಯಲ್ಲಿ ಹಲಸು ಮತ್ತು ಅಡಿಕೆಯ ವಿವಿಧ ಉತ್ಪನ್ನಗಳನ್ನು ಮಾರಾಟಕ್ಕಿಡಲಾಗಿದೆ. ಯಾವುದೇ ಕೃಷಿ ಉತ್ಪಾದನೆಗಳಿಂದ ತಯಾರಿಸಿದ ವಿವಿಧ ಉತ್ಪನ್ನಗಳು ಬೆಳೆಗಾರನಿಗೆ ಹೇಗೆ ಹೆಚ್ಚಿನ ಆರ್ಥಿಕ ಚೈತನ್ಯ ನೀಡಬಲ್ಲುದು ಎಂಬುದಕ್ಕೆ ಈ ಮಳಿಗೆ ಉದಾಹರಣೆಯಾಗಿ ಕಂಡು ಬರುತಿತ್ತು.
ಹಲಸಿನ ಕಶಿ ಗಿಡಗಳು- ದಕ್ಷಿಣ ಕನ್ನಡದ ನವನೀತ ನರ್ಸರಿಯ ಮಳೆಗೆಯಲ್ಲಿ ಕಶಿಗಟ್ಟಿದ ವಿವಿಧ ಹಲಸಿನ ಗಿಡಗಳನ್ನು ಮಾರಾಟಕ್ಕೆ ಇಡಲಾಗಿದೆ. ಗಮ್ ಲೆಸ್ ಹಲಸು, ಚೆಂಪಡ್ಕ, ಸಿಂಗಾಪುರ ಬ್ಲಾಕ್, ಡಯಾಂಗ್ ಸೂರ್ಯ ಮೊದಲಾದ ತಳಿಗಳ ಗಿಡಗಳು 100 ರೂ.ಗಳಿಂದ 250 ರೂ.ದರಗಳಲ್ಲಿ ಆಸಕ್ತರಿಗೆ ಲಭ್ಯವಿದೆ.
Breaking News
- *ಸುಂಟಿಕೊಪ್ಪದಲ್ಲಿ ಹಳೆ ವಿದ್ಯಾರ್ಥಿಗಳ ಸ್ನೇಹಮಿಲನ ಕಾರ್ಯಕ್ರಮ : ಸಾಧಕರಿಗೆ ಸನ್ಮಾನ*
- *ಹೆಗ್ಗಳ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವಾರ್ಷಿಕ ಮಹಾಪೂಜೆ*
- *ಕೂತಿನಾಡು : ದೇವಾಲಯದ ಜೀರ್ಣೋದ್ಧಾರಕ್ಕೆ ಆರೋಡ ತಾಂಬೂಲ ಪ್ರಶ್ನೆ*
- *ಮಡಿಕೇರಿ : ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಬಹುಮಾನ ವಿತರಣಾ ಸಮಾರಂಭ*
- ಕುಶಾಲನಗರ ಕನ್ನಡ ಭಾರತಿ ಕಾಲೇಜಿನಲ್ಲಿ ಅಕ್ಷರ ಜ್ಯೋತಿ ಯಾತ್ರೆ ಕುರಿತು ಉಪನ್ಯಾಸ : ವಿದ್ಯಾರ್ಥಿಗಳಲ್ಲಿ ಉತ್ತರ ಪ್ರೇರಣೆ, ಸ್ಫೂರ್ತಿ ಬೆಳೆಸಬೇಕು : ಬಸವಕುಮಾರ್ ಪಾಟೀಲ್*
- *ಶ್ರದ್ಧಾಭಕ್ತಿಯಿಂದ ಜರುಗಿದ ಅರಪಟ್ಟು ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಮಹಾಪೂಜೆ*
- *ಜಯ ಹೇ ಕರ್ನಾಟಕ ಮಾತೆ ಗೀತೆಗೆ 100 ವರ್ಷ : ಕೊಡಗಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು*
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*