ಸೋಮವಾರಪೇಟೆ ಮೇ 27 : ಸೋಮವಾರಪೇಟೆ ಟೀಚರ್ಸ್ ಕ್ವಾರ್ಟರ್ಸ್ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದ ಹಿರಿಯ ಪತ್ರಕರ್ತ ಡಿ.ಎಂ.ಚಿಣ್ಣಪ್ಪ (82) ನಿಧನರಾದರು.
ಸೋಮವಾರಪೇಟೆಯಿಂದ ಪ್ರಕಟವಾಗುತ್ತಿದ್ದ ಸಿಡಿಲು ವಾರ ಪತ್ರಿಕೆಯ ಸಂಪಾದಕರಾಗಿ ಚಿಣ್ಣಪ್ಪ ಕರ್ತವ್ಯ ನಿರ್ವಹಿಸಿದ್ದರು. ವಯೋಸಹಜ ಖಾಯಿಲೆಯಿಂದ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ ಶಕುಂತಲಾ ಸೇರಿದಂತೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.









