ಮಡಿಕೇರಿ ಮೇ 29 : ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಸುಂಟಿಕೊಪ್ಪದ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ಆಯೋಜನೆಗೊಂಡಿದ್ದ 25ನೇ ವರ್ಷದ ಡಿ.ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್‍ನ ಅಂತಿಮ ಪಂದ್ಯಾವಳಿಲ್ಲಿ ಅಮಿಗೋಸ್ ಎಫ್.ಸಿ. ಮಲಪುರಂ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು.
ಸುಂಟಿಕೊಪ್ಪದ ಮಿಡ್‍ಸಿಟಿ ಎಫ್.ಸಿ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಫೈನಲ್ ಪಂದ್ಯಾವಳಿಯನ್ನು ಮೈಸೂರು ಮಹಾರಜ ಯದುವೀರ್ ಕೃಷ್ಣದತ್ತ ಒಡೆಯರ್ ಹಾಗೂ ಕ್ರೀಡಾ ಪ್ರಾಯೋಜಕ ಡಿ.ವಿಶಾಲ್ ಶಿವಪ್ಪ ಚೆಂಡು ಒಡೆಯುವ ಮೂಲಕ ಚಾಲನೆ ನೀಡಿದರು.
ಅಮಿಗೋಸ್ ತಂಡ ಮತ್ತು ಮಿಡ್‍ಸಿಟಿ ಎಫ್.ಸಿ.ಸುಂಟಿಕೊಪ್ಪ ತಂಡಗಳ ನಡುವೆ ಫೈನಲ್ ಪಂದ್ಯಾವಳಿ ರೋಮಾಂಚನಕಾರಿಯಾಗಿ ನಡೆದು ಉಭಯ ತಂಡಗಳು ಸಮಬಲದ ಪ್ರದರ್ಶನ ನೀಡುವುದರೊಂದಿಗೆ ನೆರೆದಿದ್ದ ಕ್ರೀಡಾಭಿಮಾನಿಗಳಿಗೆ ಕ್ರೀಡೆಯ ರಸದೌಣವನ್ನು ಉಣಬಡಿಸಿತು.
ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ, ಕೇಕೆ ಕ್ರೀಡಾಪಟುಗಳಿಗೆ ಪ್ರೋತ್ಸಾಹ ತುಂಬಿತು. ಬಿರುಸಿನ ಆಟವನ್ನು ಕ್ರೀಡಾಪಟುಗಳು ಪ್ರದರ್ಶಿಸಿದರು.
ಪಂದ್ಯದ ಮೊದಲಾರ್ಧದ 25 ನಿಮಿಷದಲ್ಲಿ ಮಲಪುರಂ ತಂಡದ ಮುನ್ನಡೆ ಆಟಗಾರ ಅಂದಾಸ್ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಮೊದಲ ಗೋಲು ಗಳಿಸಿ ತಂಡಕ್ಕೆ ನೆರವಾದರು.
ದ್ವಿತೀಯಾರ್ಧದ ಮಿಡ್‍ಸಿಟಿ ತಂಡದ ಆಟಗಾರ ತನ್ವೀರ್ 10ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಸಮಬಲ ಸಾಧಿಸಲು ಕಾರಣರಾದರು.
ಉಳಿದ ಸಮಯದಲ್ಲಿ ಎರಡು ಎರಡು ತಂಡಗಳಿಗೂ ಅವಕಾಶ ದೊರೆತರೂ ಗೋಲುಗಳಿಸುವಲ್ಲಿ ಉಭಯ ತಂಡಗಳು ವಿಫಲಗೊಂಡ ಪರಿಣಾಮ ಟ್ರೈಬ್ರೇಕರ್‍ನ ಮೊರೆ ಹೋಗಲಾಯಿತು.
ಇದರಲ್ಲಿ 5-1 ಗೋಲುಗಳ ಅಂತರದಲ್ಲಿ ಅಮಿಗೋಸ್ ಎಫ್.ಸಿ ಮಲಪುರಂ ತಂಡವು ಗೆಲುವು ಸಾಧಿಸಿ ಡಿ.ಶಿವಪ್ಪ ಸ್ಮಾರಕ ಗೋಲ್ಡ್‍ಕಪ್‍ನೊಂದಿಗೆ ರೂ.1 ಲಕ್ಷ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ದ್ವಿತೀಯ ಸ್ಥಾನ ಪಡೆದ ಮಿಡ್‍ಸಿಟಿ ತಂಡಕ್ಕೆ ರೂ.50 ಸಾವಿರ ನಗದು ಹಾಗೂ ಟ್ರೋಫಿ ಬಹುಮಾನವಾಗಿ ನೀಡಲಾಯಿತು.
ಈ ಸಂದರ್ಭ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಒಡೆಯರ್, ಚಿತ್ರ ನಟಿ ಶುಭ್ರ ಅಯ್ಯಪ್ಪ, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ, ಕಾಫಿ ಬೆಳೆಗಾರ ಆನಂದ್ ಬಸಪ್ಪ, ಉದ್ಯಮಿ ಹರಪಳ್ಳಿ ರವೀಂದ್ರ, ಹಿರಿಯ ವಕೀಲ ಚಂದ್ರಮೌಳಿ, ಜಿ.ಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಮಾಜಿ ಸದಸ್ಯ ಪಿ.ಎಂ.ಲತೀಫ್, ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಸೇರಿದಂತೆ ಮತ್ತಿರರು ಹಾಜರಿದ್ದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*