ಮಡಿಕೇರಿ ಮೇ 29 : ಕೊಡಗು ಜಿಲ್ಲೆಯ 56 ಮೊಹಲ್ಲಾಗಳ ಜಮಾಅತ್ ಪದಾಧಿಕಾರಿಗಳು ಕೊಡಗು ಖಾಝಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರನ್ನು ಭೇಟಿಯಾದರು.
ಕೊಡಗು ಜಿಲ್ಲೆಯ ಸಂಯುಕ್ತ ಖಾಝಿ ಕಾಂತಪುರಂ ಎ.ಪಿ ಉಸ್ತಾದರು ಕೊಡಗಿಗೆ ಆಗಾಗ್ಗೆ ಭೇಟಿ ನೀಡಿ ಸಂಬಂಧವನ್ನು ಹೆಚ್ಚಿಸುತ್ತಿದ್ದರು.
ಈ ಸಂಬಂಧವನ್ನು ಗಟ್ಟಿಗೊಳಿಸುವ ಸಲುವಾಗಿ ಸುನ್ನಿ ಸಂಘಟನೆಗಳ ನಾಯಕರು ಹಾಗೂ ಸಮಿತಿ ಪದಾಧಿಕಾರಿಗಳು ಕ್ಯಾಲಿಕಟ್‍ನ ಜಾಮಿಉಲ್ ಫುತೂಹ್‍ನಲ್ಲಿ ಸಭೆ ನಡೆಸಿದರು.
ಮೊಹಲ್ಲಾ – ಸಾಂಸ್ಥಿಕ ಸಬಲೀಕರಣ, ಆದರ್ಶ ಪ್ರಚಾರ, ಶಿಕ್ಷಣ ಮತ್ತು ಸಾಮಾಜಿಕ ಸೇವೆ, ಇತ್ಯಾದಿಗಳ ಕುರಿತು ಚರ್ಚೆ ನಡೆಸಿದರು. ಕಾಂತಪುರಂ ಉಸ್ತಾದ್ ಎಲ್ಲಾ ಮೊಹಲ್ಲಾಗಳಲ್ಲಿ ಮಹ್ಲರತುಲ್ ಬದ್ರಿಯ್ಯಃ ಪ್ರಾರಂಭಿಸಲು ಸೂಚಿಸಿದರು.
ಈ ಬಾರಿ ಹಜ್ ಯಾತ್ರೆಗೆ ತೆರಳುವವರಿಗಾಗಿ ವಿಶೇಷವಾಗಿ ಪ್ರಾರ್ಥಿಸಿದರು. ಕಾಂತಪುರಂ ಉಸ್ತಾದ್ ಖಾಝಿಯಾಗಿರುವ ವಿವಿಧ ಮಹಲ್ಲುಗಳ ಸಂಗಮ ಮುಂದಿನ ದಿನಗಳಲ್ಲಿ ಜಾಮಿಉಲ್ ಫುತೂಹ್‍ನಲ್ಲಿ ನಡೆಯಲಿದೆ ಎಂದರು.
ಸಭೆಯಲ್ಲಿ ಡಾ.ಎ.ಪಿ.ಅಬ್ದುಲ್ ಹಕೀಂ ಅಝ್ಹರಿ ಮೊಹಲ್ಲಾ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಅಗತ್ಯ ಸಲಹೆಗಳನ್ನು ನೀಡಿದರು.
ಕೊಡಗು ಜಿಲ್ಲಾ ನಾಇಬ್ ಖಾಝಿ ಕೆ.ಎಸ್.ಶಾದುಲಿ ಫೈಝಿ, ಎಸ್ ವೈಎಸ್ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಝ್ ಸಅದಿ, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಅಶ್ರಫ್ ಅಹ್ಸನಿ ವಿರಾಜಪೇಟೆ, ಸಿ.ಪಿ.ಅಬ್ದುಲ್ ಮಜೀದ್ ಮದನಿ, ಮುಹಮ್ಮದ್ ಹಾಜಿ ಕುಂಜಿಲ, ಅಬ್ದುಲ್ ಹಮೀದ್ ಮುಸ್ಲಿಯಾರ್, ಸಯ್ಯಿದ್ ಇಲ್ಯಾಸ್ ತಂಘಳ್ ಎಮ್ಮೆಮಾಡು, ಝಬೈರ್ ಸಅದಿ, ವಕೀಲ ಕುಂಞ್ಞಬ್ದುಲ್ಲಾ ಹಾಗೂ ಪಿ.ಎ.ಯೂಸುಫ್ ಹಾಜಿ ಮತ್ತಿತರರು ಮಾತನಾಡಿದರು.
ವರದಿ : ಅಶ್ರಫ್