ಮಡಿಕೇರಿ ಮೇ 29 : ಮೈಸೂರು ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್‍ಮೆಂಟ್ (ಮೈಸೆಮ್) ಕಾಲೇಜಿನ ವಾರ್ಷಿಕೋತ್ಸವ ಮತ್ತು ಪದವಿ ಪ್ರದಾನ ಸಮಾರಂಭದ ಪ್ರಯುಕ್ತ ಜೂ.3 ರಂದು ಅಂತರ ಕಾಲೇಜು ಫ್ಯಾಶನ್ ಶೋ ಆಯೋಜಿಸಲಾಗಿದೆಯೆಂದು ಕಾಲೇಜಿನ ಸಂಯೋಜಕ ತಂಬಂಡ ಪವನ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್‍ಮೆಂಟ್ ಕಾಲೇಜಿನಲ್ಲಿ ಜೂ.1 ರಂದು ಪದವಿ ಪ್ರದಾನ ಸಮಾರಂಭ ನಡೆಯಲಿದ್ದು, ಅಂದು 122 ಕ್ಕೂ ಹೆಚ್ಚಿನ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆಂದು ಮಾಹಿತಿಯನ್ನಿತ್ತರು.
ಜೂ.2 ರಂದು ಕಾಲೇಜು ವಾರ್ಷಿಕೋತ್ಸವ `ಮೈಸಿರಿ-2023′ ನಡೆಯಲಿದ್ದು, ಅಂದು ವಿವಿಧ ಕ್ರಿಡಾ ಚಟುವಟಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆಯೆಂದು ತಿಳಿಸಿದರು.
ಜೂ.3 ರಂದು ಅಂತರ ಕಾಲೇಜು ತಂಡಗಳ ಫ್ಯಾಶನ್ ಶೋ ಮತ್ತು ಡಿಜೆ ನೈಟ್ ಕಾರ್ಯಕ್ರಮ ನಡೆಯಲಿದೆ. ಫ್ಯಾಶನ್ ಶೋದಲ್ಲಿ ಪದವಿ ಮತ್ತು ಇಂಜಿನಿಯರಿಂಗ್ ಕಾಲೇಜು ತಂಡಗಳು ಪಾಲ್ಗೊಲ್ಳಬಹುದಾಗಿದ್ದು, ಫ್ಯಾಶನ್ ಶೋ ಕಾರ್ಯಕ್ರಮ ನಿರ್ವಾಹಕರಾದ ಅಮರ್ ಅವರನ್ನು ಈ ಬಗ್ಗೆ (ಮೊ.9036860756) ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ವಿಜೇತರಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನವನ್ನು ನೀಡಲಾಗುತ್ತದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಆಯೋಜಕರಾದ ಟಿ.ಎ.ರಕ್ಷಿತ, ವಿದ್ಯಾರ್ಥಿ ಪಿ.ಜೆ.ಸಂದೀಪ್ ಉಪಸ್ಥಿತರಿದ್ದರು.









