ಸಿದ್ದಾಪುರ ಮೇ 29 : ಸಹಾರ ಯೂಥ್ ಕ್ಲಬ್ ಆಶ್ರಯದಲ್ಲಿ ಚೆನ್ನಯ್ಯನಕೋಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ 4ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಅಂತಿಮ ಪಂದ್ಯಾವಳಿಯಲ್ಲಿ ಚೆನ್ನಯ್ಯನಕೋಟೆಯ ಸಹಾರ ಯೂಥ್ ಕ್ಲಬ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಆರು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಒಟ್ಟು 72 ತಂಡಗಳು ಭಾಗವಹಿಸಿದ್ದು, ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಸಹಾರ ತಂಡದ ಜೂನೈದ್, ಉತ್ತಮ ಗೋಲ್ ಕೀಪರ್ ಸಹಾರ ತಂಡದ ಅಮೀರ್, ಅತೀ ಹೆಚ್ಚು ಗೋಲು ಬಾರಿಸಿದ ಪ್ರಶಸ್ತಿಯನ್ನು ಅಮತ್ತಿ ತಂಡದ ರಹೀಸ್, ಪಡೆದುಕೊಂಡರು.
ಸಮಾರೋಪ : ಸಮಾರೋಪ ಸಮಾರಂಭದಲ್ಲಿ ಕೊಡಗು ಮುಸ್ಲಿಂ ಕಪ್ ನ ಸಂಸ್ಥಾಪಕ ಆಸೀಫ್ ಆಪು ಮಾತನಾಡಿ, ಪ್ರತಿಭಾವಂತ ಕ್ರೀಡಾಪಟುಗಳನ್ನು ಬೆಳೆಸುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ನಾಲ್ಕು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಚೆನ್ನಯ್ಯನಕೋಟೆಯಲ್ಲಿ ಸೌಹಾರ್ದತೆಯಿಂದ ಆಯೋಜಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕಾಲ್ಚೆಂಡು ನ ಅಧ್ಯಕ್ಷ ಸಲೀಂ ಹಾಗೂ ಅಬ್ದುಲ್ ಅವರನ್ನು ಸನ್ಮಾನಿಸಿ ಗೌರವಿಸಿಲಾಯಿತು.
ಈ ಸಂದರ್ಭ ಸಾಗರ್ ಸಂಘದ ಸ್ಥಾಪಕ ಎಚ್.ಎ.ಮುಸ್ತಫ, ಗ್ರಾ.ಪಂ ಸದಸ್ಯರಾದ ರಾಜೇಶ್, ವಿಜು, ಸರ್ವಸಾಯಿ ಅಧ್ಯಕ್ಷ ಅಬ್ದುಲ್ ರೆಹಮಾನ್, ಕಿಶೋರ್ ಕುಮಾರ್, ಇಬ್ರಾಹಿಂ, ರದೀಶ್, ರವೀಂದ್ರ ಭಾವೆ, ಸಹಾರ ಯೂಥ್ ಕ್ಲಬ್ ನ ಊರೈಸ್, ಕಾರ್ಯದರ್ಶಿ ಅಬ್ದುಲ್ ಮುಜಿಬ್, ಶಬೀರ್, ಆಸೀಫ್, ನಿಶಾದ್ ಸೇರಿದಂತೆ ಮತ್ತಿರರ ಗಣ್ಯರು ಪಾಲ್ಗೊಂಡಿದ್ದರು.