ಸುಂಟಿಕೊಪ್ಪ ಜೂ.1 : ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ಶಾಲೆ ಪ್ರಾರಂಭೋತ್ಸವವನ್ನು ಆಚರಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿ ಸ್ವಾಗತಿಸಿದರು.
ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ವಿತರಿಸಿಸಲಾಯಿತು.
ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ವಾದ್ಯಗೋಷ್ಠಿಯೊಂದಿಗೆ ಜಾಥದ ಮೂಲಕ ಶಿಕ್ಷಕಣದ ಕುರಿತು ಅರಿವು ಮೂಡಿಸಲಾಯಿತು.
ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ರಫೀಕ್ ಖಾನ್, ಪಂಚಾಯಿತಿ ಸದಸ್ಯೆ ವಸಂತಿ, ಎಸ್‍ಡಿಎಂಸಿ ಸದಸ್ಯ ಶಿವಪ್ಪ, ಮುಖ್ಯೋಪಾದ್ಯಾಯನಿ ಗೀತಾ, ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಬಾಲಕೃಷ್ಣ, ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಸಿ.ಟಿಸೋಮಶೇಖರ್, ಲಿಯೋನ, ಪ್ರಕಾಶ್, ಸುನಂದ, ಚಿತ್ರ, ಶಾಂತಹೆಗ್ಡೆ, ಜಯಶ್ರೀ, ಪ್ರಾಥಮಿಕ ಶಾಲೆಯ ಶಿಕ್ಷಕರುಗಳಾದ ದೈಹಿಕ ಶಿಕ್ಷಣ ಶಿಕ್ಷಕ ಪಿ.ಇ.ನಂದ, ಸಹಶಿಕ್ಷಕರುಗಳಾದ ಸೌಭಾಗ್ಯ, ಚಂದ್ರವತಿ, ಉಷಾ, ಇಂದಿರಾ ಹಾಗೂ ಪೋಷಕರು ಹಾಜರಿದ್ದರು.