ಮಡಿಕೇರಿ ಜೂ.14 : ಮಫ್ರೀಡಂ ಬಾಯ್ಸ್ ಹುಂಡಿ ಎಸ್. ಬಿ. ಸಿ ಸಿದ್ದಾಪುರದಲ್ಲಿ ಆಯೋಜಿಸಲಾದ ಪ್ರಥಮ ವರ್ಷದ ಕೊಡಗು ಮುಸ್ಲಿಂ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕುಶಾಲನಗರ ತಂಡ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.
36 ತಂಡಗಳು ಭಾಗವಹಿಸಿದ ಪಂದ್ಯಾವಳಿಯಲ್ಲಿ ಕುಶಾಲನಗರದ ರಫೀಕ್ – ಅಬು, ವಿರಾಜಪೇಟೆಯ ನವಾಫ್ – ಇರ್ಷಾದ್, ಹುಂಡಿಯ ರಿಯಾಸ್ – ಮುಸ್ತಫಾ, ಗೋಣಿಕೊಪ್ಪ ಸಜೀರ್ – ಸಿಬಿಲ್ ಜೋಡಿಗಳು ಸೆಮಿಫೈನಲ್ ಪ್ರವೇಶಿಸಿತ್ತು.
ಕುಶಾಲನಗರ ಹಾಗೂ ವಿರಾಜಪೇಟೆ ನಡುವಿನ ಪ್ರಥಮ ಸೆಮಿಫೈನಲ್ ಪಂದ್ಯಾಟದಲ್ಲಿ ವಿರಾಜಪೇಟೆ ತಂಡವನ್ನು ಮಣಿಸಿ ಕುಶಾಲನಗರ ತಂಡ ಫೈನಲ್ ಪ್ರವೇಶಿಸಿತು. ಹುಂಡಿ ಹಾಗೂ ಗೋಣಿಕೊಪ್ಪ ತಂಡಗಳ ನಡುವಿನ ದ್ವಿತೀಯ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಗೋಣಿಕೊಪ್ಪ ತಂಡವನ್ನು ಮಣಿಸಿ ಹುಂಡಿ ಜೋಡಿಗಳು ಫೈನಲ್ ಪ್ರವೇಶಿಸಿದರು.
ರೋಚಕ ಫೈನಲ್ ಪಂದ್ಯಾವಳಿಯಲ್ಲಿ ಹುಂಡಿ ಹಾಗೂ ಕುಶಾಲನಗರ ಮೊದಲ ಸುತ್ತು ಸಹೋದರ ಜೋಡಿಗಳಾದ ರಿಯಾಸ್ ಹಾಗೂ ಮುಸ್ತಫಾ ರವರ ಹುಂಡಿ ತಂಡ ತಮ್ಮದಾಗಿಸಿಕೊಂಡಾಗ, ಎರಡನೇ ಹಾಗೂ ಮೂರನೇ ಸುತ್ತು ರಫೀಕ್ – ಅಬು ಜೋಡಿಗಳಾದ ಕುಶಾಲನಗರ ತಂಡ ತಮ್ಮದಾಗಿಸಿಕೊಂಡು ಪ್ರಥಮ ಕೊಡಗು ಮುಸ್ಲಿಂ ಬ್ಯಾಡ್ಮಿಂಟನ್ ಟೂರ್ನಮೆಂಟ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು.
ಫ್ರೀಡಂ ಬಾಯ್ಸ್ ತಂಡದ ಮೊಹ್ಯದ್ದೀನ್, ರಿಯಾಸ್, ನಿಯಾಝ್, ನಝೀರ್ ಈ ನಾಲ್ವರ ಮುಂದಾಳತ್ವದಲ್ಲಿ ನಡೆದ ಪ್ರಥಮ ಕೊಡಗು ಮುಸ್ಲಿಂ ಬ್ಯಾಡ್ಮಿಂಟನ್ ಟೂರ್ನಮೆಂಟ್ ದಾನಿಗಳ ಸಹಕಾರದಿಂದ ಯಶಸ್ವಿಯಾಗಿ ನಡೆಯಿತು.